ಬೈಕ್ಗೆ ಟಿಪ್ಪರ್ ಡಿಕ್ಕಿ; ಇಬ್ಬರಿಗೆ ಗಾಯ
ಮಾಲೂರು: ಅತಿ ವೇಗದಲ್ಲಿ ಬಂದ ಟಿಪ್ಪರ್ವೂಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ತೀವ್ರಗಾಯಗೊಂಡ ಘಟನೆ ಇಲ್ಲಿನ ಟೇಕಲ್ ರಸ್ತೆಯ ಹರಿಪುರ ಗೇಟ್ಬಳಿ ಬುಧವಾರ ಸಂಜೆ ನಡೆದಿದೆ.
ತೀವ್ರವಾಗಿ ಗಾಯಗೊಂಡವರನ್ನು ಕಾಡುಗೋಡಿ ಸಮೀಪದ ಬೆಳತ್ತೂರು ಗ್ರಾಮದ ಮಂಜುನಾಥ್(25)ಹಾಗೂ ಹರಿಪುರದ ಚೈತನ್ಯ(18)ಎಂದು ಗುರುತಿಸಲಾಗಿದೆ.
ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಕೋಲಾರದ ಆಸ್ವತ್ರೆಗೆ ಸಾಗಿಸಲಾಗಿದೆ. ಘಟನೆಗೆ ಕಾರಣವಾದ ಟಿಪ್ಪರ್ನ್ನು ರೂಚ್ಚಿಗೆದ್ದಿರುವ ಗ್ರಾಮಸ್ಥರು ಸಂಪೂರ್ಣ ಜಖಂ ಮಾಡಿ ರಸ್ತೆ ತಡೆ ನಡೆಸಿದರು. ಟೇಕಲ್ನಿಂದ ದಿನನಿತ್ಯ ಬೆಂಗಳೂರು ಕಡೆ ಸಾಗುವ ನೂರಾರು ಜಲ್ಲಿ ತುಂಬಿರುವ ಟಿಪ್ಪರ್ಗಳು ಅತಿ ವೇಗದಲ್ಲಿ ಸಂಚರಿಸುತ್ತಿದ್ದು, ಕಳೆದ ಒಂದು ತಿಂಗಳಲ್ಲಿ 4 ನೇ ಪ್ರಕರಣ ಇದಾಗಿದೆ. ಕಳೆದ ತಿಂಗಳು ಇದೇ ರಸ್ತೆಯ ವಡಗೂರು ಗೇಟ್ಬಳಿ ನಡೆದಿದ್ದ ಘಟನೆಯಲ್ಲಿ ಯುವಕನನ್ನು ಬಲಿ ತೆಗೆದುಕೊಂಡಾಗ ಗ್ರಾಮಸ್ಥರು ಯುವಕನ ಶವವನ್ನು ಮುಂದಿಟ್ಟುಕೊಂಡು ರಸ್ತೆಯಲ್ಲೇ ಪ್ರತಿಭಟನೆ ನೆಡೆಸಿದ್ದರು. ಇಂದಿನ ಘಟನೆಗೂ ಅದೇ ಜಲ್ಲಿ ತುಂಬಿದ್ದ ಟಿಪ್ಪರ್ ಅಪಘಾತಕ್ಕೆ ಕಾರಣವಾದ ಕಾರಣ ರೊಚ್ಚಿಗೆದ್ದ ಹರಿಪುರದ ಗ್ರಾಮಸ್ಥರು ಟಿಪ್ಪರ್ ಗಾಜುಗಳನ್ನು ಪುಡಿ ಮಾಡಿದರಲ್ಲದೇ ಜಲ್ಲಿಯನ್ನು ರಸ್ತೆಗೆ ಸುರಿದು ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿದರು. ಇದರಿಂದ ಸಂಜೆ 4 ಗಂಟೆ ನಂತರ ಮಾಲೂರು-ಬಂಗಾರಪೇಟೆ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಬ್ಧವಾಗಿತ್ತು. ಸ್ಥಳೀಯ ಇನ್ಸ್ಪೆಕ್ಟರ್ ಶಿವುಕುಮಾರ್, ಎಸ್ಐ ಮಂಜುನಾಥ್ ಸ್ಥಳಕ್ಕೆ ಧಾವಿಸಿ ರೊಚ್ಚಿಗೆದ್ದ ಗ್ರಾಮಸ್ಥರನ್ನು ಮನವೂಳಿಸಲು ಹರಸಾಹಸ ಮಾಡಬೇಕಾಯಿತು. ಟಿಪ್ಪರ್ಗೆ ಬೆಂಕಿ ಹಚ್ಚುವ ಗ್ರಾಮಸ್ಥರ ಪ್ರಯತ್ನವನ್ನು ತಡೆದ ಪೊಲೀಸರು, ದಾಂಧಲೆಯನ್ನು ಚಿತ್ರಿಕರಿಸಲು ಹೋದಾಗ ಗ್ರಾಮಸ್ಥರ ಧಮಕಿಯಿಂದ ಹಿಂದೆ ಸರಿದ ಘಟನೆ ನಡೆದಿದೆ. ಮೊಬೈಲ್ನಲ್ಲಿ ಚಿತ್ರಿಕರಿಸಲು ಹೋದ ಭತ್ತೇಶ್ ಎಂಬುವನ ಮೇಲೆ ರೊಚ್ಚಿಗೆದ್ದ ಗ್ರಾಮಸ್ಥರು ಹಲ್ಲೆ ಮಾಡಿದ ಪರಿಣಾಮ ಭತ್ತೇಶ್ನ್ನು ಮಾಲೂರಿನ ಆಸ್ವತ್ರೆಗೆ ಸೇರಿಸಲಾಗಿದೆ. ಘಟನೆ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರೊಚ್ಚಿಗೆದ್ದಿರುವ ಗ್ರಾಮಸ್ಥರ ಮನವೂಳಿಕೆ ಪ್ರಯತ್ನ ನೆಡೆಸಿದರು.
35 ಕೆಜಿ ತಾಮ್ರದ ಸ್ಕ್ರಾಪ್ ಕಳವು
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಯ ಕಂಪ್ರೆಸ್ರ್ನ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಸುಮಾರು 35 ಕೆ.ಜಿ. ತೂಕದ ತಾಮ್ರದ ಸ್ಕ್ರಾಪ್ ಕಳವು ಮಾಡಿರುವ ಘಟನೆ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ತಡವಾಗಿ ದೂರು ದಾಖಲಾಗಿದೆ. ಕಳೆದ ಜ.10 ರಂದು ಬೆಳಗಿನ ಜಾವ 2.45 ಗಂಟೆಗೆ ಪಾಲಘಾಟ್ ಲೈನ್ ವ್ಯಾಪ್ತಿಯಲ್ಲಿ ಬಿಜಿಎಂಎಲ್ನ ಚಿನ್ನದ ಗಣಿಗೆ ಸೇರಿದ 10 ಕಂಪ್ರಸರ್ ಹಿಂಭಾಗದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಸುಮಾರು 17 ಸಾವಿರ ಬೆಲೆ ಬಾಳುವ 35 ಕೆಜಿ ತೂಕದ ತಾಮ್ರದ ಸ್ಕ್ರಾಪ್ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ರಾತ್ರಿ ಕಾರ್ಯನಿರ್ವಹಿಸುತ್ತಿದ್ದ ಚಿನ್ನದ ಗಣಿ ಭದ್ರತಾ ಸಿಬ್ಬಂದಿ ಹೋಗಿ ನೋಡಿದಾಗ ಕಳುವಾಗಿರುವ ಬಗ್ಗೆ ತಿಳಿದು ಕೂಡಲೇ ಚಿನ್ನದ ಗಣಿಯ ಹೆಚ್ಚಿನ ಭದ್ರತಾಧಿಕಾರಿಗಳಿಗೆ ಹಾಗೂ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಕೂಡಲೇ ತಮ್ಮ ವಾಹನದಲ್ಲಿ ಕಳ್ಳರ ಹುಡುಕಾಟ ನಡೆಸುತ್ತಿದ್ದಾಗ ಮೂವರು ಆಸಾಮಿಗಳು ಒಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದು ಭದ್ರತಾ ಸಿಬ್ಬಂದಿಯನ್ನು ಕಂಡು ವಾಹನವನ್ನು ಅತಿವೇಗವಾಗಿ ಚಲಾಯಿಸಿದ್ದರಿಂದ ಆಯಾ ತಪ್ಪಿ ಕೆಳಗೆ ಬಿದ್ದು ವಾಹನ ಸೇರಿದಂತೆ ಕಳುವಿನ ಮಾಲನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ದ್ವಿಚಕ್ರ ವಾಹನ, ಎರಡು ಗಡಾರಿ, ಎರಡು ಕಬ್ಬಿಣದ ಕಟ್ಟರ್ ತಾಮ್ರದ ಚೀಲವನ್ನು ಉರಿಗಾಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದು ಬಿಜಿಎಂಎಲ್ ಮುಖ್ಯಾಧಿಕಾರಿ ದಯಾನಂದ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕ್ರಮ ಕೈಗೊಂಡಿದ್ದಾರೆ.
ಅನಾಥ ಶವ ಪತ್ತೆ
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಉತ್ತರ ಪಿನಾಕಿನಿ ನದಿ ದಂಡೆಯ ಸ್ಮಶಾನದ (ಉಡುಮುಗುಂಡ್ಲು) ಸಮೀಪ ಸುಮಾರು 30 ವರ್ಷ ವಯಸ್ಸಿನ ಗಂಡು ವ್ಯಕ್ತಿಯ ಅನಾಥ ಶವ ಪತ್ತೆಯಾಗಿದೆ. ದನ ಮೇಯಿಸಲು ಹೋದವರು ಹೊಂಗೆ ಮರದಲ್ಲಿ ನೇಣು ಬಿಗಿದು ಕೊಂಡಿರುವುದನ್ನು ಕಂಡು ಮಂಚೇನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಸುಂದರ್ ಮತ್ತು ಸಿಬ್ಬಂದಿ ಪರಿಶೀಲಿಸಿದ್ದು, ಸುಮಾರು ಒಂದು ವಾರದ ಹಿಂದೆ ವ್ಯಕ್ತಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ನಾಯಿಗಳು ಹೆಣದ ಕೈ ಮತ್ತು ಕೆಲವು ಭಾಗಗಳನ್ನು ಕಚ್ಚಿ ಹೊತ್ತೊಯ್ದಿರಬಹುದೆಂದು ಶಂಕಿಸಲಾಗಿದ್ದು, ಶವ ಪರಿಕ್ಷೆ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.