ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೂರ್ಯನ ಕಿರಣಗಳಿಂದ ರಂಗನಾಥ ಸ್ವಾಮಿಯ ಪಾದಸ್ಪರ್ಶ

Vishwanath S
Updated On : 16 Jan 2014, 1:35 am

ಚಿಕ್ಕಬಳ್ಳಾಪುರ: ಮಕರ ಸಂಕ್ರಾಂತಿ ಹಬ್ಬದ ದಿನದಂದು ಮುಂಜಾವದಲ್ಲಿ ಸೂರ್ಯನ ಕಿರಣಗಳು ಶ್ರೀ ರಂಗನಾಥ ಸ್ವಾಮಿಯ ಪಾದಸ್ಪರ್ಶ ಮಾಡುವ ಮನಮೋಹಕ ದೃಶ್ಯವನ್ನು ಬುಧವಾರ ಕಂಡು ಭಕ್ತರು ಪುಳಕಿತರಾದರು.
ಶ್ರೀ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ಆಲಯ ಅನೇಕ ಶತಮಾನಗಳ ಇತಿಹಾಸವನ್ನು ಹೊಂದಿದ್ದು ಇಲ್ಲಿ ಶ್ರೀ ರಂಗನಾಥ ಸ್ವಾಮಿ ಆದಿಶೇಷನ ಮೇಲೆ ಪವಡಿಸಿರುವ ಸಾಲಿಗ್ರಾಮದ ಏಕಾಶಿಲೆಯಲ್ಲಿ ಪ್ರತಿಷ್ಠಾಪಿಸಿರುವ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಮಕರ ಸಂಕ್ರಾಂತಿಯ ದಿನದಂದು ಮುಂಜಾವದಲ್ಲಿ ಪ್ರಪ್ರಥಮವಾಗಿ ಆದಿಶೇಷನನ ನೆರಳಿನಲ್ಲಿ ಮಲಗಿರುವ ರಂಗನಾಥ ಸ್ವಾಮಿಯ ಪಾದಗಳನ್ನು ಸ್ಪರ್ಶಿಸುತ್ತದೆ. ಈ ದೃಶ್ಯವನ್ನು ನೋಡಲು ಭಕ್ತರು ಪ್ರತಿ ವರ್ಷ ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಅದರಂತೆ ಬುಧವಾರ ಮುಂಜಾವ 6.07 ನಿಮಿಷಕ್ಕೆ ಸೂರ್ಯನ ಕಿರಣಗಳು ಸ್ವಾಮಿಯ ಪಾದದ ಮೇಲೆ ಬೀಳುತ್ತಿದ್ದಂತೆ ಭಕ್ತರು ಜೈ ರಂಗನಾಥ ಸ್ವಾಮಿ ಎಂದೆಲ್ಲಾ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಇದಕ್ಕೂ ಮುನ್ನಾ ಭಜನಾ ಮಂಡಳಿಯಿಂದ ಇಡೀ ರಾತ್ರಿ ಭಜನಾ ಕಾರ್ಯಕ್ರಮಗಳು ನಡೆದವು. ನಗರ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಭಕ್ತಾದಿಗಳು ದೇವರ ದರ್ಶನಕ್ಕಾಗಿ ಮುಂಜಾವ 5 ಗಂಟೆಗೇ ಆಲಯಕ್ಕೆ ಆಗಮಿಸಿದ್ದರು. ಪ್ರಾತಃಕಾಲ 4 ಗಂಟೆಗೆ ದೇವರಿಗೆ ವಿಶೇಷ ಅಭಿಷೇಕ ಕೈಗೊಂಡು ಆಕರ್ಷಕ ಅಲಂಕಾರ ಮಾಡಲಾಗಿತ್ತು. ಸೂರ್ಯನ ಕಿರಣಗಳು ಸ್ಪರ್ಶಿಸುತ್ತಿದ್ದಂತೆ ಮಹಾಮಂಗಳಾರತಿ ಮಾಡಿ ದೇವರಿಗೆ ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಯಿತು.ಆಗಮಿಸಿದ ಭಕ್ತಾದಿಗಳಿಗಾಗಿ ಪ್ರಸಾದ ವಿನಿಯೋಗ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement