ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಪಂ ಸಿಇಒ ವರ್ಗಾವಣೆ ರದ್ದತಿಗೆ ಕೇಂದ್ರ ಸಚಿವರ ಪ್ರಯತ್ನ

Vishwanath S
Updated On : 17 Jan 2014, 12:57 pm

ಕೋಲಾರ: ಇಲ್ಲಿನ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜುಲ್ಫಿಖಾರ್ ಉಲ್ಲಾ ಅವರ ವರ್ಗಾವಣೆ ರದ್ದು ಮಾಡಿಸಿ ಇನ್ನಷ್ಟು ದಿನ ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಪ್ರಯತ್ನಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಸರ್ಕಾರ ಇತ್ತೀಚೆಗೆ ಸಿಇಒ ಜುಲ್ಪಿಖಾರ್ ಉಲ್ಲಾ ಅವರನ್ನು ವರ್ಗಾವಣೆ ಮಾಡಿ ಸ್ಥಳ ತೋರಿಸಿಲ್ಲ. ಇವರ ಜಾಗಕ್ಕೆ ಮಹಿಳಾ ಐಎಎಸ್ ಅಧಿಕಾರಿ ವಿನುತಾ ಪ್ರಿಯ ಎಂಬವರನ್ನು ವರ್ಗಾವಣೆ ಮಾಡಲಾಗಿದೆಯಾದರೂ ಕೆಲ ಗೊಂದಲಗಳಿಂದಾಗಿ ಅಧಿಕಾರ ಸ್ವೀಕರಿಸಿಲ್ಲ.
ಜುಲ್ಫಿಖಾರ್ ಉಲ್ಲಾ ಅವರ ವರ್ಗಾವಣೆಯನ್ನು ರದ್ದುಪಡಿಸದಿದ್ದರೆ ಅಲ್ಪಸಂಖ್ಯಾತರಿಗೆ ತಪ್ಪು ಸಂದೇಶ ಹೋಗುತ್ತದೆ, ಇದರಿಂದ ಲೋಕಸಭಾ ಚುನಾವಣೆಯಲ್ಲಿ ತೊಂದರೆ ಆಗಬಹುದೆಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ಜೊತೆ ಮಾತನಾಡಿ ವರ್ಗಾವಣೆ ರದ್ದು ಮಾಡಿ ಇನ್ನಷ್ಟು ದಿನ ಜಿಲ್ಲೆಯಲ್ಲಿ ಉಳಿಸುವಂತೆ ಶಿಫಾರಸ್ಸು ಮಾಡಿದ್ದು ಪ್ರಸ್ತುತ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಧಾನಿಗೆ ವಾಪಸ್ ಬಂದ ನಿಂತರ ನಿರ್ಧಾರ ಕೈಗೊಳ್ಳಲಿದ್ದಾರೆನ್ನಲಾಗಿದೆ.
ಸಿಇಒ ವರ್ಗಾವಣೆಯಿಂದ ಕೋಲಾರ ಜಿಪಂನಲ್ಲಿ ಕಳೆದ ಎರಡು ಮೂರು ದಿನಗಳಿಂದ ಅಲ್ಲೋಲ ಕಲ್ಲೋಲ ಉಂಟಾಗಿದ್ದು ಸರ್ಕಾರದ ಆದೇಶಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಅವರು ವಿನುತಾ ಪ್ರಿಯ ಅವರನ್ನು ಕೋಲಾರಕ್ಕೆ ಕರೆತರಲು ಪ್ರಯತ್ನಿಸಿದ್ದಾರೆನ್ನಲಾಗಿದ್ದು, ಒಂದು ವೇಳೆ ಜುಲ್ಫಿಖಾರ್ ಉಲ್ಲಾ ಅವರ ವರ್ಗಾವಣೆ ರದ್ದು ಅದಲ್ಲಿ ಸ್ವಾಮಿಗೆ ಹಿನ್ನಡೆ ಆಗಬಹುದೆಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement