ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ತಾಲೂಕಿನಲ್ಲಿ ನೀರಿನ ಭವಣೆ ಇಲ್ಲ

Vishwanath S
Updated On : 17 Jan 2014, 1:00 am

ಟೇಕಲ್: ಮಾಲೂರು ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಶಾಸಕ ಕೆ.ಎಸ್. ಮಂಜುನಾಥಗೌಡರ ನೇತೃತ್ವದಲ್ಲಿ 265 ಕೊಳವೆ ಬಾವಿಗಳು ಕೊರೆಸಿದ್ದು ಬಹುತೇಕ ಕುಡಿಯುವ ನೀರಿನ ಭವಣೆ ನೀಗಿಸಿದಂತಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ತಿಳಿಸಿದರು.
ಕೊಂಡಶೆಟ್ಟಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆಡಿಎಸ್. ಬೆಂಬಲಿತ ಕೆ.ಎನ್. ವೆಂಕಟೇಶಗೌಡ ಅವರನ್ನು ಅಭಿನಂದಿಸಿ ಮಾತನಾಡಿ, ಟೇಕಲ್ ಜಿಪಂ ವ್ಯಾಪ್ತಿಯಲ್ಲಿ 32 ಓವರ್ ಹೆಡ್ ಟ್ಯಾಂಕ್ ಮಂಜೂರಾಗಿದ್ದು 20 ರ ಕಾಮಗಾರಿ ಮುಗಿಯುತ್ತಾ ಬಂದಿದೆ. ಇನ್ನು 12 ಟ್ಯಾಂಕುಗಳು ಪ್ರಾರಂಭಿಕ ಹಂತದಲ್ಲಿವೆ ಎಂದರು.
ನೂತನ ಅಧ್ಯಕ್ಷ ಕೆ.ಎನ್. ವೆಂಕಟೇಶಗೌಡ ಮಾತನಾಡಿ, ಕೊಂಡಶೆಟ್ಟಹಳ್ಳಿ ಗ್ರಾಪಂನ್ನು ಮಾದರಿ ಮಾಡಲು ಪಣತೊಡುವುದಾಗಿ ತಿಳಿಸಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಆನೇಪುರದ ಹನುಮಂತಪ್ಪ ಮಾತನಾಡಿದರು.
ಅಭಿನಂದನಾ ಸಭೆಯಲ್ಲಿ ಮಾಜಿ ಹಂಗಾಮಿ ಅಧ್ಯಕ್ಷೆ ಶೈಲಜಾ ಶ್ರೀನಿವಾಸ್, ಸದಸ್ಯರಾದ ಕೆ.ಆರ್.ನಾರಾಯಣಸ್ವಾಮಿ, ಎಸ್. ಕೆಂಪರಾಜು, ಹೇಮಾವತಿ ಹುಚ್ಚಪ್ಪ, ಜಯಮ್ಮಅಬ್ಬಯ್ಯ, ಲಕ್ಷ್ಮಮ್ಮಮುನಿಸ್ವಾಮಿ, ನಾರಾಯಣಮ್ಮ, ನಾಗರಾಜಾಚಾರಿ, ಕೆ.ಎಸ್. ಶಿವರಾಜ್, ಕೆ.ಅರುಣಾಶ್ರೀನಿವಾಸ್, ಎಂ. ನಂದೀಶಪ್ಪ ಇದ್ದರು.
ಅಧ್ಯಕ್ಷ ಚುನಾವಣೆ; ಕೊಂಡಶೆಟ್ಟಹಳ್ಳಿ ಗ್ರಾಪಂನಲ್ಲಿ ಹಿಂದೆ ಅಧ್ಯಕ್ಷರ ಅವಿಶ್ವಾಸ ನಿರ್ಣಯದ ಹಿನ್ನಲೆಯಲ್ಲಿ ಅಧ್ಯಕ್ಷರನ್ನು ಪದಚ್ಯುತಿ ಮಾಡಲಾಗಿತ್ತು. ಒಟ್ಟು 16 ಸಂಖ್ಯಾಬಲದ ಸದಸ್ಯರಿರುವ ಈ ಪಂಚಾಯ್ತಿಯಲ್ಲಿ 16ರಂದು ಅಧ್ಯಕ್ಷರ ಗಾದಿಗೆ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ ಕೆ.ಎನ್. ವೆಂಕಟೇಶಗೌಡ 12 ಮತಗಳು ಪಡೆದು ಬಿ.ಜೆ. ವೆಂಕಟರಮಣಪ್ಪ 4 ಮತಗಳು ಪಡೆದಿದ್ದರು.
ಚುನಾವಣಾಧಿಕಾರಿ ಲೋಕೋಪಯೋಗಿ ಇಲಾಖೆ ಬಸವರಾಜುರವರು  ಕೆ.ಎನ್. ವೆಂಕಟೇಶಗೌಡರನ್ನು ಅಧ್ಯಕ್ಷರಾಗಿ ಘೋಷಿಸಿದರು. ಪಿಡಿಒ ವಸಂತ್‌ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್‌ಮೂರ್ತಿ, ಚಿನ್ನಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement