ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಚಾರಣಾಧೀನ ರೌಡಿ ಠಾಣೆಯಿಂದ ಪರಾರಿ

Vishwanath S
Updated On : 17 Jan 2014, 12:57 pm

ಮಾಲೂರು: ಇಲ್ಲಿನ ಪೊಲೀಸರ ಕರ್ತವ್ಯ ಲೋಪದಿಂದ ಕಸ್ಟಡಿಯಲ್ಲಿದ್ದ ರೌಡಿಯೂಬ್ಬ ಸಿನೀಮಯ ರೀತಿಯಲ್ಲಿ ಪೊಲೀಸ್ ಠಾಣೆಯಿಂದಲೇ ಪರಾರಿಯಾದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯ ರೌಡಿಶೀಟರ್ ಚಿಕ್ಕಬೇಗೂರುನ ವಿಜಯಕುಮಾರ್ ಎಂಬ ವಿಚಾರಧೀನ ರೌಡಿ ಇಲ್ಲಿನ ಪೊಲೀಸ್ ಠಾಣೆಯಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ. ವಿಷಯ ತಿಳಿದ ಜಿಲ್ಲಾ ವರಿಷ್ಠಾಧಿಕಾರಿ ರಾಮ್‌ನಿವಾಸ್ ಸಪಟ್ ಹಾಗೂ ಡಿವೈಎಸ್‌ಪಿ ಆಶೋಕ್ ಕುಮಾರ್ ಇಲ್ಲಿನ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಪರಾರಿಯಾಗಿರುವ ಖೈದಿಗಾಗಿ ಎರಡು ತಂಡ ರಚಿನೆ ಮಾಡಿದ್ದಾರೆ.
ಘಟನೆ ವಿವಿರ: ಕಳೆದ ಎರಡು ತಿಂಗಳ ಹಿಂದೆ ಇಲ್ಲಿನ ಹೊಸೂರು ರಸ್ತೆಯ ಹುಲಿಮಂಗಲ ಹೊಸಕೋಟೆ ಗೇಟ್ ಬಳಿ ರೆಡ್ಡಿ ಎಂಬವನ್ನು ಬೆದರಿಸಿ ಚಾಕುವಿನಿಂದ ಹಲ್ಲೆ ಮಾಡಿದ್ದ ಆರೋಪಿ ರೌಡಿ ವಿಜಯಕುಮಾರ್ ರೆಡ್ಡಿ ಬಳಿಯಿದ್ದ ಹಣ ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ ಯಾವೂದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯವರು ಅಲ್ಲಿನ ಪ್ರಕರಣಕ್ಕೆ ಸಂಬಂಧಿಸಿ ರೌಡಿ ವಿಜಯಕುಮಾರ್‌ನನ್ನು ಬಂಧಿಸಿ ತನಿಖೆ ನಡೆಸಿದಾಗ ಮಾಲೂರಿನಲ್ಲಿ ಮಾಡಿದ್ದ ರಸ್ತೆ ದರೋಡೆ ಪ್ರಕರಣದ ಬಗ್ಗೆ ತಿಳಿಸಿದ್ದ.
ಈ ಬಗ್ಗೆ ಮಾಹಿತಿ ಪಡೆದ ಇಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಶಿವುಕುಮಾರ್ ಬಾಡಿ ವಾರೆಂಟ್ ಮೂಲಕ ಕಳೆದ 13 ರಂದು ರೌಡಿ ವಿಜಯಕುಮಾರ್‌ನನ್ನು ಮಾಲೂರು ಠಾಣೆಗೆ ಕರೆತಂದಿದ್ದರು. ಎರಡು ದಿನ ವಿಚಾರಣೆ ನಂತರ ಗುರುವಾರ ಬೆಳಿಗ್ಗೆ ನ್ಯಾಯಾಲಕ್ಕೆ ಹಾಜರು ಪಡಿಸಬೇಕಾಗಿತ್ತು. ಆದರೆ ಗುರುವಾರ ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಕರ್ತವ್ಯ ಮೇಲಿದ್ದ ಪೊಲಿಸ್ ಪೇದೆಗಳಲ್ಲೆರೂ ಠಾಣೆ ಮುಂದೆ ಸಾಗುತ್ತಿದ್ದ ಕಲ್ಲು ತುಂಬಿದ್ದ ಲಾರಿಯನ್ನು ತಡೆಯಲು ಹೋಗಿದ್ದ ಸಂಧರ್ಭ ನೋಡಿ ನಟೋರಿಯಸ್ ರೌಡಿ ವಿಜಯಕುಮಾರ್ ಕೈಗೆ ಹಾಕಿದ್ದ ಬೇಡಿಯನ್ನು ಕೀ ಮೂಲಕ ತೆರವುಗೊಳಿಸಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ವಿಷಯವನ್ನು ಪೊಲೀಸ್ ಮೂಲಗಳೇ ಖಚಿತ ಪಡಿಸಿದ್ದು, ಈ ಹಿಂದೆ ಇದೇ ರೀತಿ ಲಾರಿಗಳಲ್ಲಿನ ಮಾಮೂಲಿಗಾಗಿಯೇ ಸಸ್ವಂಡ್ ಆಗಿದ್ದ ಪೊಲೀಸ್ ಪೇದೆಗುರುವಾರ ಬೆಳಗಿನ ಜಾವ ಕರ್ತವ್ಯದಲ್ಲಿದ್ದ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಡಿವೈಎಸ್‌ಪಿ  ಕೆ. ಆಶೋಕ್ ಕುಮಾರ್, ನಟೋರಿಯಸ್ ರೌಡಿ ಶೀಟರ್ ವಿಜಯ ಕುಮಾರ್ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಹೋಗಿರುವ ಘಟನೆ ನೆಡಿರುವುದು ನಿಜವಾಗಿದ್ದು, ಆಗಿರುವ ಕರ್ತವ್ಯ ಲೋಪದ ಬಗ್ಗೆ ವರದಿ ನೀಡಲು ಮಾಲೂರು ಠಾಣೆಗೆ ಭೇಟಿ ನೀಡಲಾಗಿದೆ ಎಂದರು.
ಸಂಜೆಯೊಳಗೆ ಪ್ರಕರಣ ಕುರಿತು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದ ಡಿವೈಎಸ್‌ಪಿಗಳು ಎಸ್‌ಐ ಡೈರಿ ಬರೆದಿರುವ ಬಗ್ಗೆಯಾಗಲಿ, ಪ್ರಕರಣ ನಡೆದಾಗ ಕರ್ತವ್ಯ ಮೇಲಿದ್ದ ಪೊಲೀಸ್‌ಪೇದೆಗಳ ವಿವಿರಗಳನ್ನಾಗಲಿ ನೀಡಲು ನಿರಾಕರಿಸಿದ್ದಾರೆ.
ಪಿಎಸ್‌ಐ ಸೇರಿದಂತೆ ನಾಲ್ವರ ಅಮಾನತು
ಕೋಲಾರ: ಮಾಲೂರು ಪೊಲೀಸ್ ಠಾಣೆಯಿಂದ ಖೈದಿ ವಿಜಯಕುಮಾರ್ ಅಲಿಯಾಸಸ್ವಿಜಿ ಎಂಬುವನು ಗುರುವಾರ ಬೆಳಗಿನ ಜಾವ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಪರಾರಿ ಆಗಿರುವ ಹಿನ್ನಲೆಯಲ್ಲಿ ಕರ್ತವ್ಯ ನಿರ್ಲಕ್ಷ್ಯದಡಿ ಠಾಣೆಯ ಪಿಎಸ್‌ಐ ಸೇರಿದಂತೆ ನಾಲ್ವರನ್ನು ಅಮಾನತುಪಡಿಸಲಾಗಿದೆ.
ಮಾಲೂರು ಠಾಣೆಯ ಪಿಎಸ್‌ಐ ಮಂಜುನಾಥ್, ಮುಖ್ಯ ಪೇದೆ ತಿಮ್ಮರಾಯಪ್ಪ, ಪೇದೆಗಳಾದ ರಾಜೇಂದ್ರ ಪ್ರಸಾದ್ ಹಾಗೂ ನಾಗರಾಜರಾವ್ ಅಮಾನತುಗೊಂಡವರಾಗಿದ್ದಾರೆ. ಬೆಂಗಳೂರು, ಮಾಲರು ಸೇರಿದಂತೆ ವಿವಿಧ ಕಡೆ ಕಳ್ಳತನ ಮಾಡಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ವಿಜಯಕುಮಾರ್‌ನನ್ನು ಮಾಲೂರು ಪೊಲೀಸರು ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಿಂದ ಜ.13 ರಂದು ಕರೆತಂದಿದ್ದರು. ಗುರುವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿತ್ತು. ರಾತ್ರಿ ಪಾಳೆಯಲ್ಲಿದ್ದ ಪೊಲೀಸರು ಬೆಳಗಿನ ಜಾವ ಆರೋಪಿಯನ್ನು ಗಮನಿಸಿಕೊಳ್ಳದೆ ಜಲ್ಲಿ ತುಂಬಿ ಹೋಗುತ್ತಿದ್ದ ಲಾರಿಯನ್ನು ಹಿಡಿಯಲು ಠಾಣೆಯಿಂದ ಹೊರ ಹೋಗಿದ್ದಾಗ ಈ ಅವಕಾಶ ಬಳಸಿಕೊಂಡ ಖೈದಿ ಕೈಕೋಳಕ್ಕೆ ಹಾಕಿದ್ದ ಬೀಗವನ್ನು ತೆಗೆದು ಪರಾರಿಯಾಗಿರುವ ಹಿನ್ನಲೆಯಲ್ಲಿ ಡಿವೈಎಸ್ಪಿ ಅಶೋಕ್ ಕುಮಾರ್ ನೀಡಿದ ವರದಿ ಆಧರಿಸಿ ಕರ್ತವ್ಯ ಲೋಪವೆಸಗಿರುವ ಪಿಎಸ್‌ಐ ಮತ್ತು ಮೂವರು ಪೇದೆಗಳನ್ನು ಅಮಾನತುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾವಮ್ನಿಪಾಸ್ ಸಪಟ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement