ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೆಮಿಸ್ಟರ್ ಪದ್ಧತಿ ವಿರೋಧಿಸಿ ಪ್ರತಿಭಟನೆ

Vishwanath S
Updated On : 17 Jan 2014, 12:58 pm

ಕೋಲಾರ: ಐಟಿಐ ವಿದ್ಯಾಭ್ಯಾಸಕ್ಕೆ ಸೆಮಿಸ್ಟರ್ ಪದ್ಧತಿ ಜಾರಿ ಮಾಡಿರುವುದನ್ನು ಖಂಡಿಸಿ ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟ ಹಾಗೂ ರಾಷ್ಟ್ರೀಯ ಯುವ ವಿದ್ಯಾರ್ಥಿ ಒಕ್ಕೂಟದಿಂದ ಗರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿಯ ತನಕ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೈತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಹೂಹಳ್ಳಿ ನಾಗರಾಜ್ ಮಾತನಾಡಿ, ಐ.ಟಿ.ಐಗಳಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸುವ ಬಗ್ಗೆ ತೀವ್ರ ಗೊಂದಲವಿದೆ. ಎಲ್ಲಾ ಸಂಸ್ಥೆಗಳಿಗೂ ಈ ವಿಷಯ ಸೂಕ್ತವಾದ ರೂಪದಲ್ಲಿ ಸ್ಪಷ್ಟವಾಗಿ ಸಮಯಕ್ಕೆ ಸರಿಯಾಗಿ ತಲುಪಿಲ್ಲ. ಸೆಮಿಸ್ಟರ್ ಪದ್ಧತಿಯನ್ನು ನಡೆಸುವ ಬಗ್ಗೆ ತರಬೇತಿ ನೀಡುವವರಿಗೂ ಸರಿಯಾದ ಮಾಹಿತಿ ನೀಡಿಲ್ಲ. ಸೆಮಿಸ್ಟರ್ ಪದ್ಧತಿಯಲ್ಲಿ ಅನುತ್ತೀರ್ಣರಾದ ತರಬೇತುದಾರರಿಗೆ ಕೇವಲ 2 ಬಾರಿ ಅಂದರೆ, ಪ್ರವೇಶ ಪಡೆದ ಪರೀಕ್ಷೆಯ ನಂತರ ಕೇವಲ ಒಂದು ಬಾರಿ ಮಾತ್ರ ಮರುಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಸಿರುವುದರಿಂದ ತರಬೇತುದಾರನ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಆರೋಪಿಸಿದರು.
ಸೆಮಿಸ್ಟರ್ ಪದ್ಧತಿಗೆ ಮುಂಚೆ ಎಲ್ಲಾ ರೀತಿಯ ವೃತ್ತಿ ಪರೀಕ್ಷೆಗಳನ್ನು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ನಡೆದು, ಉತ್ತರ ಪತ್ರಿಕೆಗಳು ಆಯಾ ರಾಜ್ಯಗಳಿಗೆ ಸಂಬಂದಿಸಿದ ಇಲಾಖೆಯಿಂದ ಮೌಲ್ಯಮಾಪನ ನಡೆಸುತ್ತಿದ್ದರು ಎಂದು ತಿಳಿಸಿದರು. ಸೆಮಿಸ್ಟರ್ ಪದ್ಧತಿ ಜಾರಿ ಮಾಡುವ ಮೊದಲು ಎಲ್ಲಾ ಸಾಧಕ ಭಾದಕಗಳನ್ನು ಪರಿಶೀಲಿಸಿ, ಸಂಬಂಧ ಪಟ್ಟ ಇಲಾಖಾ ಸಿಬ್ಬಂದಿಯವರಿಗೆ ಪೂರ್ವ ತರಬೇತಿಯನ್ನು ನೀಡಿ ನಂತರ ಜಾರಿಗೊಳಿಸುವುದು ಇಲಾಖೆಯ ಕರ್ತವ್ಯವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ  ರೈತ ಒಕ್ತಾಕೂಟದ ತಾಲೂಕು ಅಧ್ಯಕ್ಷ ಮುರಳಿ, ಕಾರ್ಯದರ್ಶಿ ಕಿರಣ್‌ಕುಮಾರ್, ಎನ್. ರಾಜು, ವಿಶ್ವನಾಥ್, ಗೌರಿ ಶಂಕರ್, ಸುನೀಲ್, ಸುಮ, ಸಂಧ್ಯಾ, ರೋಜಾ, ಮಲ್ಲಿಕಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement