ಕೌಟುಂಬಿಕ ಕಲಹ; ಗರ್ಭಿಣಿ ಆತ್ಮಹತ್ಯೆ
ಬಾಗೇಪಲ್ಲಿ: ಕೌಟುಂಬಿಕ ಕಲಹದಿಂದ ಗರ್ಭಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚೇಳೂರು ಹೋಬಳಿಯ ಪಾತೂರು ಗ್ರಾಮದಲ್ಲಿ ನಡೆದಿದೆ.
ಭಾಗ್ಯಮ್ಮ(28) ಎಂಬುವವರೇ ವಿಷ ಸೇವಿಸಿ ಮೃತಪಟ್ಟಿರುವ ದುರ್ದೈವಿ. ಪತಿ ಮಧುಸೂಧನರೆಡ್ಡಿ ಮತ್ತು ಭಾಗ್ಯಮ್ಮರವರ ನಡುವೆ ಸಣ್ಣ ವಿಚಾರಕ್ಕೆ ದಿನ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ನೊಂದ ಮಹಿಳೆ ಬೆಳೆಗಳಿಗೆ ಹಾಕುವ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೊಂಡಕ್ಕೆ ಜಾರಿ ತಾಯಿ-ಮಗ ಸಾವು
ಕೋಲಾರ: ಗೋಣಿ ಚೀಲ ತೊಳೆಯಲು ಕೋಡಿಕಣ್ಣೂರು ಕೆರೆಗೆ ಬಂದಿದ್ದ ತಾಯಿ ಮತ್ತು ಮಗ ಕೆರೆಯಲ್ಲಿನ ಹೊಂಡಕ್ಕೆ ಜಾರಿ ಬಿದ್ದು ಸತ್ತಿರುವ ಘಟನೆ ಶನಿವಾರ ನಡೆದಿದೆ. ಮೃತರು ತಾಲೂಕಿನ ಜಡೇರಿ ಗ್ರಾಮದ ಮುಮ್ತಾಜ್ ಬೇಗ್ ಹಾಗೂ ಮೆಹಮೂದ್ ಎಂದು ಗುರುತಿಸಲಾಗಿದೆ. ತಾಯಿ ಮತ್ತು ಮಗ ಇಬ್ಬರು ಕೋಲಾರದ ಎಪಿಎಂಸಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು, ಗೋಣಿ ಚೀಲಗಳನ್ನು ಸ್ವಚ್ಛಡಲು ಕೆರೆಗೆ ಬಂದಿದ್ದಾಗ ಹೊಂಡದಲ್ಲಿ ಜಾರಿ ಬಿದ್ದಿರುವುದರಿಂದ ಸಾವು ಸಂಭವಿಸಿದೆ ಎಂದು ಗಲಲ್ಪೇಟೆ ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಕಳವು
ಮುಳಬಾಗಲು: ಮನೆಯ ಬೀಗ ಹೊಡೆದು ಒಳ ನುಗ್ಗಿರುವ ಕಳ್ಳರು ಮನೆಯಲ್ಲಿ ಕಳವು ಮಾಡಿರುವ ಪ್ರಕರಣ ಪಟ್ಟಣದ ಮುತ್ಯಾಲಪೇಟೆಯಲ್ಲಿ ಸಂಜೆ ನಡೆದಿದೆ.
ಶ್ಯಾಗತ್ತೂರು ನಾರಾಯಣಸ್ವಾಮಿ ಮನೆಯಲ್ಲಿದ್ದ ಬೆಳ್ಳಿ, ಚಿನ್ನ ಹಾಗೂ ನಗದು ಸೇರಿ ಒಟ್ಟು ಹತ್ತು ಲಕ್ಷರು.ಗಳು ಕಳವಾಗಿದೆ ಎಂದು ಅವರು ಮುಳಬಾಗಲು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.