ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಚೆ ಪೇದೆಗಳ ಕಲ್ಯಾಣಕ್ಕಾಗಿ ಸಚಿವರೊಡನೆ ಚರ್ಚೆ

Rashmi Kasaragodu
Updated On : 21 Jan 2014, 1:27 am


ಮಾಲೂರು: ಗ್ರಾಮೀಣ ಭಾಗದ ಅಂಚೆ ಪೇದೆಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಕಲ್ಯಾಣಕ್ಕಾಗಿ ಕೇಂದ್ರ ಸಂಪರ್ಕ ಖಾತೆ ಸಚಿವರೂಡನೆ ಚರ್ಚಿಸುವುದಾಗಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ರಾಷ್ಟ್ರೀಯ ಅಂಚೆ ನೌಕರರ ಸಂಘಗಳ 22 ನೇ ಜಂಟಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇಂದಿನ ಕೂರಿಯರ್ ಯುಗದಲ್ಲಿ ಅಂಚೆ ಇಲಾಖೆಯ ಕಾರ್ಯ ಕುಂಠಿತವಾದರೂ ಕಟ್ಟಕಡೆಯ ವ್ಯಕ್ತಿಗೂ ಪತ್ರ ತಲುಪಿಸುತ್ತಿದ್ದಾನೆ. ಸೈಕಲ್ಗಳಲ್ಲಿ ಹಳ್ಳಿ-ಹಳ್ಳಿ ಸುತ್ತುವ ಅಂಚೆ ಪೇದೆಗಳು ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು. ಅವರ ಕಷ್ಟಗಳ ಬಗ್ಗೆ ಕೇಂದ್ರ ಸಂಪರ್ಕ ಖಾತೆ ಸಚಿವರೊಡನೆ ಮಾತನಾಡಿ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು.
ಫೇಡರೇಷನ್ಆಫ್ ನ್ಯಾಷನಲ್ ಪೋಸ್ಟಲ್ ಆರ್ಗನೈಸೇಷನ್ನ ಪ್ರಧಾನ ಕಾರ್ಯದರ್ಶಿ ಡಿ. ಕಿಷನ್ರಾವ್ ಮಾತನಾಡಿದರು. ಇದೇ ಸಂಧರ್ಭದಲ್ಲಿ ನೂತನವಾಗಿ ಆಯ್ಕೆಯಾದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕೇಂದ್ರ ಸಚಿವ ಕೆ.ಎಚ್. ಮುಯಪ್ಪರನ್ನು ಸನ್ಮಾನಿಸಿದರು. ಟಿ.ಎನ್. ರಹತೆ, ರಾಷ್ಟ್ರೀಯ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಯು. ಮುರಳೀಧರನ್, ಚನ್ನಕೇಶವ, ಎಸ್.ಎನ್. ರಘುನಾಥ್, ಆರ್. ರಾಜಣ್ಣ, ಅನಿಲ್ಕುಮಾರ್, ಬಿಸ್ಸೇಗೌಡ, ಕೆ. ಮುನಿರಾಜು, ಚೆನ್ನರಾಯಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement