ಅಂತೂ ಬಂದರು ನೂತನ ಸಿಇಒ
ಕೋಲಾರ: ಜಿಪಂ ನೂತನ ಸಿಇಒ ಆರ್. ವಿನೋತ್ ಪ್ರಿಯ ಸೋಮವಾರ ಅಧಿಕಾರ ಸ್ವೀಕರಿಸಿದರು. ಸರ್ಕಾರ ಈವರೆಗೆ ಸಿಇಒ ಆಗಿದ್ದ ಝುಲ್ಪಿಖಾರ್ ಉಲ್ಲಾ ಅವರನ್ನು ವರ್ಗಾವಣೆ ಮಾಡಿ 2 ವಾರಗಳ ಹಿಂದೆಯೇ ಆದೇಶ ಹೊರಡಿಸಿತ್ತಾದರೂ ಇವರ ವರ್ಗಾವಣೆ ರದ್ದತಿಗೆ ಕೆಲ ರಾಜಕಾರಣಿಗಳು ಪ್ರಯತ್ನಿಸಿದ್ದರಿಂದ ಗೊಂದಲ ಉಂಟಾಗಿತ್ತು. ಈ ಕಾರಣಕ್ಕಾಗಿ ವಿನೋತ್ ಪ್ರಿಯ ಅಧಿಕಾರ ಸ್ವೀಕಾರ ವಿಳಂಬವಾಗಿತ್ತು. ಸೋಮವಾರ ಬೆಳಿಗ್ಗೆ ನೂತನ ಸಿಇಒ ವರ್ಗಾವಣೆಗೊಂಡಿರುವ ಝಲ್ಫಿಖಾರ್ ಉಲ್ಲಾ ರಿಂದ ಅಧಿಕಾರ ಸ್ವೀಕರಿಸಿದರು. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಪ್ರಿಯ 2010ರಲ್ಲಿ ಐಎಎಸ್ ಮುಗಿಸಿದ್ದಾರೆ.