ಒತ್ತುವರಿ ತೆರವಿಗೆ ಆಗ್ರಹಿಸಿ ಮನವಿ
ಚಿಂತಾಮಣಿ: ಅಕ್ರಮವಾಗಿ ಸರ್ಕಾರಿ ಜಮೀನನ್ನು ಹಲವರು ಒತ್ತುವರಿ ಮಾಡಿಕೊಂಡು ದಲಿತರಿಗೆ ತೊಂದರೆ ಮಾಡುತ್ತಿರುವ ಭೂಗಳ್ಳರವಿರುದ್ಧ ತಾಲೂಕು ದಂಡಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಣ್ಣಾ ಹಜಾರೆ ತಂಡದ ಜಿಲ್ಲಾ ಸಂಚಾಲಕ ಮೋಹನ್ ಕುಮಾರ್ ಮನವಿ ಮಾಡಿದರು.
ನಗರದ ಸೊಣ್ಣಶೆಟ್ಟಹಳ್ಳಿ ಗ್ರಾಮದ ಸರ್ವೇ ನಂ.76,ಎ ರಲ್ಲಿ 1-11 ಗುಂಟೆ ಖರಾಬು ಜಮೀನಿನಲ್ಲಿ 22 ಗುಂಟೆ ತಪಥೇಶ್ವರ ಕಾಲೋನಿ ದಲಿತ ನಿರಾಶ್ರಿತರಿಗೆ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನ ಗೃಹಗಳನ್ನು ನಗರ ಸಭೆ ನಿರ್ಮಿಸಿಕೊಟ್ಟಿತ್ತು.
ಆದರೆ ಡಿಶ್ ಅಶ್ವಥರೆಡ್ಡಿ, ಕಿರಿಕ್ ಕೃಷ್ಣ, ಬೀಡಾ ಸೀನಾ ಎಂಬವರು ಸೇರಿ ಜೆಸಿಬಿ ಯಂತ್ರದ ಮೂಲಕ ಶೌಚಾಲಯ ನೆಲಸಮ ಮಾಡಿಲೇ ಔಟ್ ನಿರ್ಮಾಣಕ್ಕೆ ಯತ್ನಿಸುತ್ತಿದ್ದು, ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿಗೆ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರು. ನಾಗರಾಜು, ಶಿವ, ಹರೀಶ್, ಶ್ರೀರಾಮ, ಮಂಜುನಾಥ್, ಅಶ್ವಥ, ಸುನಿಲ್ ಕುಮಾರ್ ಇದ್ದರು.