ಕಿರುಕುಳ: ಯುವತಿ ನೇಣಿಗೆ ಶರಣು
ಬಾಗೇಪಲ್ಲಿ: ತಾನು ಮದುವೆಯಾಗುತ್ತಿದ್ದ ಹುಡುಗನ ಚಿಕ್ಕಪ್ಪನ ಮಗ ನೀಡುತ್ತಿದ್ದ ಕಿರುಕುಳ ತಾಳಲಾರದೆ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಮರವಪಲ್ಲಿ ತಾಂಡದಲ್ಲಿ ನಡೆದಿದೆ. ಭಾಗ್ಯಬಾಯಿ(21) ನೇಣು ಬಿಗಿದುಕೊಂಡು ಮೃತಪಟ್ಟಿರುವ ದುರ್ದೈವಿ. ಸ್ಥಳೀಯ ನಿವಾಸಿ ಬಾಲಾಜಿ ನಾಯಕ್ಗೆ ಕಳೆದ ಒಂದು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು ಎನ್ನಲಾಗಿದೆ. ಮದುವೆಗೆ ಇನ್ನು ಕೇವಲ 10 ದಿನ (ಫೆ.1ರಂದು)ಮಾತ್ರ ಬಾಕಿ ಇದ್ದು ಈ ನಡುವೆ ಬಾಲಾಜಿ ನಾಯಕ್ ಚಿಕ್ಕಪ್ಪನ ಮಗ ಸತ್ಯಪ್ಪ ನಾಯಕ್ ಕಿರುಕುಳ ನೀಡುತ್ತಿದ್ದ ಎಂದು ಮೃತಳ ತಂದೆ ಕೃಷ್ಣೇನಾಯಕ್ ಸ್ಥಳೀಯ ಪೊಲೀಸರಿಗೆ ಸತ್ಯಪ್ಪ ನಾಯಕ್ ವಿರುದ್ದ ದೂರು ನೀಡಿದ್ದಾರೆ.