ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿಕ್ಷಕರ ಕರ್ತವ್ಯ ಲೋಪ; ಬಿಇಒ ಸುಬ್ರಹ್ಮಣ್ಯ ತರಾಟೆ

Rashmi Kasaragodu
Updated On : 21 Jan 2014, 1:26 am

ಮಾಲೂರು: ಗುಣಾತ್ಮಕ ಶಿಕ್ಷಣ ನೀಡಿ ಉತ್ತಮ ಸಮಾಜ ನಿರ್ಮಿಸಬೇಕಾದ ಶಿಕ್ಷಕರು ಶಾಲೆಗಳಿಗೆ ನಿಗದಿತ ವೇಳೆಗೆ ಹೋಗದೆ ಕರ್ತವ್ಯ ಲೋಪವೆಸಗುತ್ತಿರುವುದು ಬೇಸರದ ಸಂಗತಿ ಎಂದು ಕ್ಷೇತ್ರಾಶಿಕ್ಷಣಾಧಿಕಾರಿ ಸುಬ್ರಹ್ಮಣ್ಯ ಹೇಳಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಅವರಣದಲ್ಲಿನ ಬಿಆರ್ಸಿ ಕೇಂದ್ರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಭಾನುವಾರ ಆಯೋಜಿಸಿದ್ದ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಶಿಸ್ತು-ಸಮಯ ಪ್ರಜ್ಞೆ ಮೂಡಿಸಬೇಕಾದ ಶಿಕ್ಷಕರು ಕರ್ತವ್ಯ ಲೋಪ ಎಸಗುತ್ತಿರುವ ದೂರುಗಳು ಬರುತ್ತಿವೆ. ಪೋಷಕರ ನಂಬಿಕೆಯನ್ನು ಶಿಕ್ಷಕರು ಉಳಿಸುವ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿ, ಮಕ್ಕಳ ಭವಿಷ್ಯಕ್ಕೆ ಅಡಿಪಾಯವಾಗಿರುವ  ಪ್ರಾಥಮಿಕ ಶಿಕ್ಷಣ ಹೆಚ್ಚು ಗುಣಾತ್ಮಕವಾಗಿರಬೇಕು. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಜ್ಞಾನವನ್ನು ಮಕ್ಕಳಿಗೆ ಹಂಚಿ, ಉತ್ತಮ ಸಮಾಜಕ್ಕೆ ಕಾರಣವಾಗಬೇಕು ಎಂದರು. ಮುನಿನಾರಾಯಣ, ಗುಂಡಣ್ಣ, ವೆಂಕಟೇಶ್ ಮಾತನಾಡಿದರು. ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ ಶಿಕ್ಷಕರ ಸಂಘದ ಡೈರಿ ಹಾಗೂ ಕ್ಯಾಲೆಂಡರ್ನ್ನು ಬಿಡುಗಡೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement