ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಶಿಡ್ಲಘಟ್ಟ: ತಾಲೂಕಿನ ವೈ.ಹುಣಸೇನಹಳ್ಳಿ ಗ್ರಾಪಂ ವ್ಯಾಪ್ತಿಯ ಕದಿರಿನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ 37 ಸೈಕಲ್ ವಿತರಣೆ ಮಾಡಿ ಶಾಸಕ ರಾಜಣ್ಣ ಮಾತನಾಡಿದರು.
ಗ್ರಾಮದಲ್ಲಿ 48.44 ಲಕ್ಷರು.ಗಳ ಅಂದಾಜು ಮೊತ್ತದಲ್ಲಿ 3,600 ಮೀ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಹಾಗೂ ಆನೆಮಡುಗು ಗ್ರಾಮದಲ್ಲಿ 15 ಲಕ್ಷ ರು.ಗಳ 300 ಮೀ ಉದ್ದದ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟಕ್ಕೆ ರಾಜಿಯಾಗದೆ ಕೆಲಸ ಮಾಡಬೇಕು. ಗ್ರಾಮಸ್ಥರು ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಪಕ್ಷಾತೀತವಾಗಿ ಸ್ಪಂದಿಸಬೇಕು. 30 ರಿಂದ ಶುರುವಾಗುವ ಅಧಿವೇಶನದಲ್ಲಿ ಶಾಸಕರಿಗೆ ಹೆಚ್ಚಿನ ಅನುಧಾನ ಹಾಗು ಸುವರ್ಣಗ್ರಾಮ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು. ಮುನಿಯಪ್ಪ, ದೊಣ್ಣಹಳ್ಳಿ ರಾಮಣ್ಣ, ರಾಮಾಂಜಿನಪ್ಪ, ಮುನೇಗೌಡ, ರವಿಕುಮಾರ್ ಎಚ್.ಸಿ.ನಾರಾಯಣಸ್ವಾಮಿ ಇದ್ದರು.