ಖಾಲಿ ಹುದ್ಧೆ ಭರ್ತಿಗೆ ಎಸ್ಡಿಪಿಐ ಒತ್ತಾಯ
ಕೋಲಾರ: ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಸೋಶಿಯಲ್ ಡೆಮೋಕ್ರಿಟಿವ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮಂದೆ ಪ್ರತಿಭಟನೆ ನಡೆಸಿ ಹೆಡ್ ಮುನ್ಷಿ ಕೃಷ್ಣೆಗೌಡರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಸರ್ಕಾರಿ ನೌಕರರ ವಯೋವುತಿ 58 ರಿಂದ 60 ಕ್ಕೇರಿಸಿ ಯುವಕರಿಗೆ ಉದ್ಯೋಗಾವಕಾಶವನ್ನು ತಪ್ಪಿಸಿ ಅನ್ಯಾಯ ಮಾಡಿದರು. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತಿ ತೋರುತಿಲ್ಲ ಎಂದು ಆರೋಪಿಸಿದರು.ಕರ್ನಾಟಕ ಸರ್ಕ್ಕಾರಿ ಇಲಾಖೆಯಲ್ಲಿ 1 ಲಕ್ಷ 80 ಸಾವಿರ ಹುದ್ದೆಗಳು ಖಾಲಿ ಇವೆ.5-6 ಸಾವಿರ ಬ್ಯಾಕ್ ಲಾಗ್ ಹುದೆಗಳು ಖಾಲಿ ಇದ್ದು ಕೋಡಲೇ ಈ ಹುದ್ದೆಗಳನ್ನು ಭರ್ತಿ ಮಾಡಬೇಕು ಇಲ್ಲವಾದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಿ ಕಚೇರಿಗಳಿಗೆ ಹೋದರೆ ಸಿಬ್ಬಂದಿ ಕೊರೆತೆ ಎಂದು ನೆಪ ಹೇಳುತ್ತಾರೆ. ಅದ್ದರಿಂದ ರಾಜ್ಯದ ಅಭಿವೃದ್ಧಿ ಕುಂಟಿತಗೊಳ್ಳುವುದು ಎಂದರು. ಪ್ರತಿಭನೆಯಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಶಾಮೀರ್ ಪಾಷ ನೇತೃತ್ವದಲ್ಲಿ ಸೋಶಿಯಲ್ ಡೆಮೋಕ್ರಿಟಿವ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಇದ್ದರು.