ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಕ್ಕಳಿಗೆ ಸೈಕಲ್ ವಿತರಣೆ

Rashmi Kasaragodu
Updated On : 22 Jan 2014, 1:39 am

ಶಿಡ್ಲಘಟ್ಟ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಶಾಸಕ ಎಂ. ರಾಜಣ್ಣ ಹೇಳಿದರು.
ತಾಲೂಕಿನ ಜಂಗಮಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 168 ಮಂದಿ ಮಕ್ಕಳಿಗೆ ಉಚಿತ ಸೈಕಲ್ಗಳನ್ನು ವಿತರಣೆ ಮಾಡಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಅಭಿವೃದ್ಧಿಸಾಧ್ಯವೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ಪೋಷಕರು ಮಕ್ಕಳನ್ನು ಶಿಕ್ಷಣದ ಕಡೆಗೆ ಆಸಕ್ತಿ ವಹಿಸುವಂತೆ ಪ್ರೇರಣೆ ನೀಡಬೇಕು. ಶಿಕ್ಷಕರೂ ಮಕ್ಕಳಲ್ಲಿ ಸೂಕ್ತ ಪ್ರತಿಭೆ ಹೊರತರಬೇಕು ಎಂದರು. ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ, ನಸೀರ್ ಅಹ್ಮದ್, ಗ್ರಾಪಂ ಉಪಾಧ್ಯಕ್ಷ ಜೆ.ಎಂ. ವೆಂಕಟೇಶ್, ವಿಜಯ್ಕುಮಾರ್, ಾದೂರು ರಮೇಶ್, ಬಳುವನಹಳ್ಳಿ ರಘುನಾಥ್, ನಾರಾಯಣಪ್ಪ, ಶ್ರೀನಿವಾಸ್, ವೆಂಕಟೇಶಪ್ಪ, ಚಂದ್ರೇಗೌಡ ಇದ್ದರು.


ಜೆಡಿಎಸ್ ಮುಖಂಡನ ಮೇಲೆ ಹಲ್ಲೆ: ಪ್ರತಿಭಟನೆ

ಚಿಂತಾಮಣಿ: ಕೋಲಾರದ ಪತ್ರಕರ್ತರ ಭವನ ಮುಂಭಾಗದಲ್ಲಿ ವಿನಾಕಾರಣ ಜೆಡಿಎಸ್ ಮುಖಂಡರಾದ ಮಂಜು ಮತ್ತು ರಮೇಶ್ ಅವರು ಏಕಾಏಕಿ ಡಿವೈಎಫ್ಐ ಮುಖಂಡ ವಿಜಯ್ಕೃಷ್ಣ ಅವರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಡಿವೈಎಫ್ಐ ತಾಲೂಕು ಶಾಖೆ ವತಿಯಿಂದ ನಗರದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಡಿವೈಎಸ್ಪಿ ಪೊಲೀಸ್ ಕಚೇರಿ ಮುಂಭಾಗದಲ್ಲಿ ಡಿವೈಎಫ್ಐ ತಾಲೂಕು ಸಂಘಟನೆಯ ಪದಾಧಿಕಾರಿಗಳು ಕೋಲಾರದ ಪತ್ರಕರ್ತರ ಭವನದ ಮುಂಭಾಗದಲ್ಲಿ ವಿನಾಕಾರಣ ಜೆಡಿಎಸ್ ಮುಖಂಡರಾದ ಮಂಜು ಮತ್ತು ರಮೇಶ್ ಅವರು ಏಕಾಏಕಿ ಡಿವೈಎಫ್ಐ ಮುಖಂಡ ವಿಜಯ್ಕೃಷ್ಣ ಅವರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ತಾಲೂಕು ಅಧ್ಯಕ್ಷ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ರಾಮು, ಮುಖಂಡರಾದ ನರಸಿಂಹ, ರಾಜು, ಬಾಬುರೆಡ್ಡಿ, ನರಸಿಂಹಪ್ಪ,ಗೋಪಾಲ್, ಶ್ರೀನಿವಾಸ್ ಯಾದವ್ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement