ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಟೇಕಲ್: ಇಲ್ಲಿನ ಪ್ರೌಢಶಾಲಾ ಮಕ್ಕಳಿಗೆ ಆಟದ ಮೈದಾನಕ್ಕಾಗಿ ಶಾಲೆ ಪಕ್ಕದಲ್ಲಿರುವ 10 ಎಕರೆ ಸರ್ಕಾರಿ ಜಾಗವನ್ನು ಸ್ಥಳದಲ್ಲೇ ಮಂಜೂರು ಮಾಡುವಂತೆ ಶಾಸಕ ಮಂಜುನಾಥಗೌಡ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಕಾಯ್ದಿರಿಸಿ ಜಾಗವನ್ನು ಜಿಲ್ಲಾಧಿಕಾರಿ ಮುಖಾಂತರ ಟೇಕಲ್ ಪ್ರೌಢಶಾಲೆಗೆ ಉತ್ತಮ ಜಾಗ ನಿರ್ಮಿಸಿಕೊಡಲು ತಿಳಿಸಿದರು. ಇಲ್ಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು. ಇದೇ ವೇಳೆ ಶಾಸಕರು ಶಾಲಾ ಮೈದಾನಕ್ಕೆ ಎಸ್ಬಿಸಿ ಸಮಿತಿ ನೀಡಿದ ಮನವಿ ಪತ್ರಕ್ಕೆ ಸ್ಪಂದಿಸಿ ಸ್ಥಳ ವೀಕ್ಷಣೆ ಮಾಡಿದರು. ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ, ಆನೇಪುರದ ಹನುಮಂತಪ್ಪ, ಆರ್.ರಾಜಣ್ಣ, ರವಿಶಂಕರ್ ಮತ್ತಿತರರು ಮಾತನಾಡಿದರು. ಬಿಇಒ ಸುಬ್ರಹ್ಮಣ್ಯಂ, ಎಸ್ಬಿಸಿ ಅಧ್ಯಕ್ಷ ಕೆ.ಬಿ.ನಾರಾಯಣಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ವೆಂಕಟಪತಿ, ಪ್ರಾಂಶುಪಾಲ ಎ.ಕೆ.ಪಾಪಣ್ಣ, ಉಪ ಪ್ರಾಂಶುಪಾಲೆ ಪುಷ್ಪಾ, ತಾಪಂ ಸದಸ್ಯರಾದ ನಿರ್ಮಲಾ ಆಂಜಿನಪ್ಪ, ಮಂಜುಳಾ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.