27ಕ್ಕೆ ಸಿಎಂ ಮನೆ ಮುಂದೆ ಧರಣಿ
ಕೆಜಿಎಫ್: ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಕಡೆಗಣಿಸಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಜ.27 ರಂದು ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಮುಂದೆ ಅನಿರ್ಧಿಷ್ಠಾವಧಿ ಧರಣಿ ನಡೆಸಲಿದೆ ಎಂದು ಡಿವೈಎಫ್ಐ ತಾಲೂಕು ಕಾರ್ಯದರ್ಶಿ ವಿಶ್ವನಾಥ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರಾದ ವೆಂಕಟೇಶ್ಬಾಬು, ರಮೇಶ್, ವಿಣಾವತಿ, ಪ್ರವಿಣಾ, ಕುಮಾರ್, ಜಾಯ್ಸ್, ಸುಧಾ, ಗಿರೀಶ್, ಪ್ರಕಾಶ್, ವೆಂಕಟೇಶ್ ಹಾಜರಿದ್ದರು.
ರಾಜೇಂದ್ರಸ್ವಾಮೀಜಿಗೆ ಡಾಕ್ಟರೇಟ್ ಗೌರವ
ಕೆಜಿಎಫ್: ನಗರದ ಆಂಡ್ರಸನ್ಪೇಟೆ ನಿವಾಸಿ ಜಿ. ರಾಜೇಂದ್ರಸ್ವಾಮಿಜಿ ರಾಜ್ಯ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮುಂತಾದ ರಾಜ್ಯಗಳಲ್ಲಿ ಹಲವಾರು ವರ್ಷಗಳಿಂದ ಉತ್ತಮ ಸಮಾಜಸೇವೆ ಮಾಡುತ್ತಿದ್ದು, ಇವರ ಸೇವೆ ಗುರುತಿಸಿ ಅವರಿಗೆ ದೆಹಲಿ ನ್ಯೂ ಇಂಟರ್ನೇಷನಲ್ ಕ್ರಿಶ್ಚಿಯನ್ ಯುನಿವರ್ಸಿಟಿ ಅಕಾಡಮಿಯಿಂದ ಡಾಕ್ಟರೇಟ್ ನೀಡಿ ಗೌರವಿಸಿರುವುದು ಸಂತಸ ತಂದಿದೆ ಎಂದು ಕೋಲಾರ ಜಿಲ್ಲಾ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಿ.ನಾಗರಾಜ್ ಹೇಳಿದರು. ಕೋಲಾರ ಜಿಲ್ಲಾ ಸಫಾಯಿ ಕರ್ಮಚಾರಿಗಳ ಹೋರಾಟ ಸಮಿತಿಯ ಹಾಗೂ ಮಾದಿಗ ಸಮುದಾಯ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಸಫಾಯಿ ಕರ್ಮಚಾರಿಗಳ ಹಾಗೂ ಮಾದಿಗ ಸಮುದಾಯದ ನೂರಾರು ಕಾರ್ಯಕರ್ತರು ಇದ್ದರು.
ಕರವೇ ಸಂಘಟನಾ ಕಾರ್ಯದರ್ಶಿ ನೇಮಕ
ಚಿಕ್ಕಬಳ್ಳಾಪುರ: ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಜಿ. ವೆಂಕಟಾಚಲಪತಿರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಶಿವರಾಮೇಗೌಡ ತಿಳಿಸಿದ್ದಾರೆ. ಕರವೇ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೆಂಕಟಾಚಲಪತಿ ಸಂಘಟನೆಗಾಗಿ ಇನ್ನೂ ಹೆಚ್ಚಿಗೆ ದುಡಿಯಲಿ ಎಂಬ ಭಾವನೆಯಿಂದ ರಾಜ್ಯ ಸಂಘಟನಾ ಕಾರ್ಯದರ್ಶಿಯ ಜವಾಬ್ದಾರಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.