ಅಪರಿಚಿತ ವಾಹನ ಡಿಕ್ಕಿ; ಜಿಂಕೆ ಸಾವು
ಮಾಲೂರು: ಇಲ್ಲಿನ ಬೆಂಗಳೂರು ರಸ್ತೆಯ ಯಶವಂತಪುರ ಅರಣ್ಯ ಪ್ರದೇಶದ ರಸ್ತೆಯಲ್ಲಿ ಅಪರಚಿತ ವಾಹನವೂಂದಕ್ಕೆ ಸಿಕ್ಕಿ ಜಿಂಕೆ ಸತ್ತಿರುವ ಘಟನೆ ಬುಧವಾರ ನಡೆದಿದೆ.
ಬೆಂಗಳೂರು ರಸ್ತೆಯ ಯಶವಂತಪುರ ಗೇಟ್ ನಂತರದ ರಸ್ತೆಯ ಎರಡು ಬದಿ ಅರಣ್ಯ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಹೆಚ್ಚಾಗಿರುವ ಜಿಂಕೆ, ಕಡವೆಗಳು ರಸ್ತೆ ದಾಟುವಾಗ ಸಾಯುತ್ತಿರುವುದು ಮಮೂಲಿಯಾಗಿದೆ.
ಬುಧವಾರ ಬೆಳಿಗ್ಗೆ ಜಿಂಕೆ ಸತ್ತಿದ್ದು, ವಿಷಯ ತಿಳಿದ ಅರಣ್ಯಪಾಲಕ ಶ್ರೀನಿವಾಸ್ ಹಾಗೂ ನಾಗರಾಜ್ ಧಾವಿಸಿ ಮೃತ ಜಿಂಕೆಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.