ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನರೇಂದ್ರ ಮೋದಿ ಪ್ರಧಾನಿಯಾಗಲು ಶ್ರಮಿಸಿ: ನಾಗರಾಜ್

Rashmi Kasaragodu
Updated On : 23 Jan 2014, 2:14 am

ಮಾಲೂರು: ದೇಶದ ಆಶಾ ಕಿರಣ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಕೋಲಾರ ಕ್ಷೇತ್ರವನ್ನು ಗೆಲ್ಲಬೇಕಾದ ಜವಾಬ್ದಾರಿ ಪಕ್ಷದ ಪ್ರತಿ ಕಾರ್ಯಕರ್ತನ ಮೇಲಿದೆ ಎಂದು ತಾಲೂಕು ಎಸ್ಟಿ ಮೋರ್ಚಾ ಅಧ್ಯಕ್ಷ ನಾಗರಾಜ್ ಕರೆ ನೀಡಿದರು.
ಪಟ್ಟಣದ ಕುಂಭೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜನಪ್ರಿಯತೆ ದೇಶದಲ್ಲಿ ಸುನಾಮಿಯಂತೆ ಬೀಸುತ್ತಿದ್ದು, ಅದನ್ನು ಕೋಲಾರ ಜಿಲ್ಲೆಯಲ್ಲೂ ನಗದು ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚು ಸಂಘಟಿತರಾಗಿ ದುಡಿಯಬೇಕಾಗಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್, ಕಂಬೋಡಿ ನಾರಾಯಣಪ್ಪ, ಸತೀಶ್ ಆರಾದ್ಯ, ನಾರಾಯಣಪ್ಪ, ಮುರಳಿ, ಎಸ್.ಬಿ. ವೆಂಕಟೇಶ್, ಕೆ.ಎಂ. ನಾರಾಯಣಪ್ಪ, ಗೋಪಾಲ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement