ಪತ್ನಿಗೆ ಹಿಂಸೆ; ಪತಿ ವಿರುದ್ಧ ದೂರು
ಮುಳಬಾಗಲು: ಪತಿಯಿಂದ ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಹಿಂಸೆಯಿಂದ ಬೇಸತ್ತ ಮಹಿಳೆ ಮುಳಬಾಗಲು ಪೊಲೀಸರಿಗೆ ಬುಧವಾರ ದೂರು ಸಲ್ಲಿಸಿದ್ದಾರೆ. ಪಟ್ಟಣದ ನೂಗಲಬಂಡೆ ಪ್ರಾಂತದ ತಜೂಮ್ ಷಬನ್ ತಾಜ್ ಎಂಬಾಕೆ ತಮ್ಮ ಪತಿ ಕಪಿಲ್ ಅಜರ್ ಎಂಬವರು ವರದಕ್ಷಿಣಿಗಾಗಿ ಪೀಡಿಸುತ್ತಿದ್ದಾರೆಂದು ದೂರಿದ್ದಾರೆ. ಪ್ರಕರಣ ಹೊಸಕೋಟೆ ಪೊಲೀಸು ಠಾಣೆ ವ್ಯಾಪ್ತಿಯ ಕಾರಣವಾಗಿ ಅಲ್ಲಿಗೆ ವರ್ಗಾಯಿಯಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಎಸಗಿದ
ಬಾಲಾಪರಾಧಿ ಬಂಧನ
ಮುಳಬಾಗಲು: ಪಟ್ಟಣದ ಪಳ್ಳಿಗರಪಾಳ್ಯದ ಸಮೀಪದ ಆಂಜನಾದ್ರಿ ಬೆಟ್ಟದ ತಪ್ಪಲಿನಲ್ಲಿ 5 ವರ್ಷದ ಹೆಣ್ಣು ಮಗುವಿನ ಮೇಲೆ 14 ವರ್ಷದ ಬಾಲಕ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 16ರ ಸಂಜೆ 5.30ರ ವೇಳೆ ಬಾಲಕ ಚಾಕಲೇಟ್ ಕೊಡಿಸುವುದಾಗಿ ತಿಳಿಸಿ 5 ವರ್ಷದ ಮಗುವನ್ನು ಬೆಟ್ಟದ ಬಳಿ ಕರೆದುಕೊಂಡು ಹೋಗಿ ಆತ್ಯಾಚಾರ ವೆಸಗಿರುವುದಾಗಿ ದೂರಲಾಗಿದೆ. ಮಗು ಅನಾರೋಗ್.ದಿಂದ ಇರುವುದನ್ನು ಗಮನಿಸಿದ ಪೋಷಕರು ವೈದ್ಯರ ಬಳಿ ತೋರಿಸಿದಾಗ ಕೃತ್ಯ ಬಹಿರಂಗಗೊಂಡಿದೆ. ಬಾಲಕ ಸರ್ಕಾರಿ ನೂತನ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಸಬ್ ಇನ್ಸ್ಪೆಕ್ಟರ್ ಮೇಲ್ವಿನ್ ಪ್ರಾನ್ಸಿಸ್ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.