ಬಿಜಿಎಸ್ ಶಾಲಾ ವಾರ್ಷಿಕೋತ್ಸವ
ಶಿಡ್ಲಘಟ್ಟ: ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ಮಂಗಳಾನಾಥ ಸ್ವಾಮಿ ಉದ್ಘಾಟಿಸಿ ಮಾತನಾಡಿದರು.
ಶಾಲಾ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ಎಂ. ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕು, ಉತ್ತಮ ಅಂಕ ಪಡೆಯಬೇಕೆಂದು ತಿಳಿಸಿದರು. ಫ್ರೊ. ಶಿವರಾಮರೆಡ್ಡಿ ಮಾತನಾಡಿ, ಬಾಲ ಗಂಗಾದರನಾಥ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ವಿದ್ಯಾಸಂಸ್ಥೆಗಳು ಕರ್ನಾಟಕದಾದ್ಯಂತ ಬೃಹತ್ ಸಂಸ್ಥೆಗಳಾಗಿ ಬೆಳೆದಿದ್ದು, ಸಮಾಜಕ್ಕೆ ವಿದ್ಯಾಬ್ಯಾಸ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ ಎಂದರು.
ಶಾಲಾ ಮಕ್ಕಳಿಂದ ನಾಟಕ, ನೃತ್ಯ, ಏಕಪಾತ್ರಾಭಿನಯ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪ್ರಾಂಶುಪಾಲ ಮಹದೇವಯ್ಯ, ರಾಮಚಂದ್ರಾಚಾರಿ, ಕೆಂಪರೆಡ್ಡಿ, ಮುನೇಗೌಡ ಇದ್ದರು.