ವಿಜೃಂಭಣೆಯಿಂದ ನಡೆದ ಚೌಡೇಶ್ವರಿ, ಸಪ್ಪಲಮ್ಮ ಜಾತ್ರೆ
ಗೌರಿಬಿದನೂರು: ತಾಲ್ಲೂಕು ದೊಡ್ಡಕುರುಗೋಡು ಗ್ರಾಮದಲ್ಲಿ ಗ್ರಾಮ ದೇವತೆಗಳಾದ ಶ್ರೀ ಚೌಡೇಶ್ವರಿ ಮತ್ತು ಸಪ್ಪಲಮ್ಮ ದೇವರ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು ಜಾತ್ರೋತ್ಸವಕ್ಕೆ ಸಾವಿರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು. ಉಪಸಭಾಪತಿ ಎನ್.ಹೆಚ್. ಶಿವಶಂಕರ ರೆಡ್ಡಿ, ಮಾಜಿ ಶಾಸಕಿ ಎನ್. ಜ್ಯೋತಿರೆಡ್ಡಿ, ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಂ. ರವಿ ನಾರಾಯಣರೆಡ್ಡಿ ಜಾತ್ರೋತ್ಸವದಲ್ಲಿ ಭಾಗವಹಿಸಿ ಗ್ರಾಮಸ್ಥರಿಗೆ ಶುಭ ಕೋರಿದರು.
ಗ್ರಾಮ ಮುಖಂಡರುಗಳಾದ ಸುರೇಶ್, ಡಿ.ಕೆ. ಗಂಗಪ್ಪ, ರಾಮಕೃಷ್ಣ ಗ್ರಾಮಪಂಚಾಯ್ತಿ ಸದಸ್ಯರು, ಡಿ.ಎನ್. ಹನುಮಂತರೆಡ್ಡಿ, ಬಿ.ಆರ್. ನಂಜಪ್ಪ, ತಿಮ್ಮರಾಜು, ಎನ್.ರಾಮಾಂಜಿನೇಯ, ಮದ್ದೂರಪ್ಪ ಮುಂತಾದ ಹಿರಿಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಜಾಗ್ರತಾ ಕ್ರ್ಝವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆರೋಗ್ಯ ಇಲಾಖೆ ಮತ್ತು ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು.