ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಚುನಾವಣೆ
ಗುಡಿಬಂಡೆ: ತಾಲೂಕಿನ ಯಲಕಲರಾಳ್ಳಹಳ್ಳಿ ಗ್ರಾಮದಲ್ಲಿನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ 2013-14 ರಿಂದ 2017-18 ನೇ ಅವಧಿಯ ನಿರ್ದೇಶಕ ಮಂಡಳಿ ಸದಸ್ಯರ ಚುನಾವಣೆಗೆ ನಾಮಪತ್ರಗಳನ್ನು ಆಹ್ವಾನಿಸಿದ್ದು, ನಾಮಪತ್ರ ಸಲ್ಲಿಸಲು ಜ.24 ಕೊನೆ ದಿನ ಆಗಿದ್ದು, ಮತದಾನ ಫೆ. 2ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ಹೆಚ್.ಎಸ್. ಜನಾರ್ದನ ತಿಳಿಸಿದ್ದಾರೆ.
ಲೋಹ ಸಂಗ್ರಹಕ್ಕೆ ಚಾಲನೆ
ಚಿಂತಾಮಣಿ: ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಪ್ರತಿಮೆ ನಿರ್ಮಿಸಲು ರೈತರು ಹೊಲದಲ್ಲಿ ಬಳಸಿ ಹಳತಾದ ಕಬ್ಬಿಣದ ಸಾಧನಗಳನ್ನು ಒದಗಿಸಲಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಹೇಳಿದರು. ತಾಲೂಕಿನ ಆಲಂಬಗಿರಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟರವಣಸ್ವಾಮಿ ದೇವಾಲಯದಲ್ಲಿ ಬುಧವಾರ ಸರ್ದಾರ್ ವಲ್ಲಬಾಯ್ ಪಟೇಲರ ಪುತ್ತಳಿ ನಿರ್ಮಾಣಕ್ಕೆ ಲೋಹ ಸಂಗ್ರಹಕ್ಕಾಗಿ ಪ್ರತಿ ಗ್ರಾಪಂನಿಂದ ಹಳೆಯ ಕೃಷಿ ಉಪಕರಣ ನೀಡಿ ಕೈ ಜೋಡಿಸಬೇಕೆಂದು ಕೋರಿದರು.