ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇಂದು ಜಿಲ್ಲೆಗೆ ಸಚಿವ ಆಂಜನೇಯ ಭೇಟಿ

Rashmi Kasaragodu
Updated On : 24 Jan 2014, 2:23 am

ಕೋಲಾರ: ತಾಲೂಕಿನ ಮದನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ಜ.24 ರಂದು ಮದ್ಯಾಹ್ನ 12 ಗಂಟೆಗೆ ಮದನಹಳ್ಳಿಯಲ್ಲಿ ನೆರವೇರಲಿದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವ ಆಂಜನೇಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಕೊಠಡಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಮ.1 ಗಂಟೆಗೆ ಮುಳಬಾಗಿಲಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರ ಮಟ್ಟಕ್ಕೆ ಆಯ್ಕೆ; ಅಭಿನಂದನೆ
ಚಿಂತಾಮಣಿ: ಚಿಂತಾಮಣಿ ಮಹಿಳಾ ಥ್ರೋ ಬಾಲ್ ತಂಡ ರಾಜ್ಯ ಮಟ್ಟದಲ್ಲಿ ಜಯ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ತಾಲೂಕು ಸರ್ಕಾರಿ ನೌಕರರ ರಾಜ್ಯ ಪರಿಷತ್ ಸದಸ್ಯ ಎನ್. ವೆಂಕಟಾಚಲಪತಿ ಅಭಿನಂದಿಸಿದ್ದಾರೆ. ತಂಡದ ಮುಂದಾಳತ್ವ ವಹಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಸಿ. ರೆಡ್ಡೆಪ್ಪ, ತಾಲೂಕು ನೌಕರರ ಸಂಘದ ಅಧ್ಯಕ್ಷ ಬಿ. ಜನಾರ್ದನರೆಡ್ಡಿ, ಖಜಾಂಚಿ ಜನಾರ್ದನಮೂರ್ತಿ ಥ್ರೋಬಾಲ್ ಸ್ಪರ್ಧಾಳುಗಳಾದ ಕೆ.ಸಿ. ಚಂದ್ರಮ್ಮ, ಮಂಜುಬಾರ್ಗವಿ, ಚೌತಾಲಿ, ಜಯಮ್ಮ, ಆಂಜಮ್ಮ, ಉಷಾರಾಣಿ ಮತ್ತು ಕೋಚ್ಗಳಾದ ಶಶಿ, ನೂರ್,ಪ್ರವೀಣ್ರನ್ನು ಅಭಿನಂದಿಸಿದ್ದಾರೆ.
ಇಂದು ಶಾಲಾ ವಾರ್ಷಿಕೋತ್ಸವ
ಕೋಲಾರ: ಬಂಗಾರಪೇಟೆ ತಾಲೂಕಿನ ಬೇತಮಂಗಲದ ಅಂಕತಟ್ಟಿ ರಸ್ತೆಯಲ್ಲಿರುವ ಶ್ರೀ ದತ್ತಸಾಯಿ ಆಂಗ್ಲ ಹಿರಿಯ ಪ್ರಾಥಮಿಕ ಮತ್ತು ವಸತಿ ಪ್ರೌಢಶಾಲೆಯ 8 ನೇ ಶಾಲಾ ವಾರ್ಷಿಕೋತ್ಸವವನ್ನು  ಜ.24 ರ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಜಿಪಂ ಸದಸ್ಯ ಅ.ಮು. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸುವರು. ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್, ವಕೀಲ ಕೆ. ರಘುಪತಿ, ದತ್ತಸಾಯಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಎನ್.ಎಂ. ಲಲಿತಮ್ಮ, ಆರೀಫ್ ಖಾನ್ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement