ದೊಡ್ಡಕೆರೆಗೆ ಚರಂಡಿ ನೀರು ಹರಿಸಲು ಆಗ್ರಹ
ಮಾಲೂರು: ಪ್ರಭಾವಿಗಳ ತೋಟದ ಪಾಲಾಗುತ್ತಿರುವ ಪಟ್ಟಣದ ಚರಂಡಿ ನೀರು ನೇರವಾಗಿ ದೊಡ್ಡಕೆರೆಗಳಿಗೆ ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಅಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಇಲ್ಲಿನ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.
ಸಂಘಟನೆ ಅಧ್ಯಕ್ಷ ಬೆ. ರಮೇಶ್ ಮಾತನಾಡಿ, ಪಟ್ಟಣ ಹಾಗೂ ಹೊರವಲಯದಲ್ಲಿ ಕೊಳವೆ ಬಾವಿಗಳು ಬತ್ತಿಹೋಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಕರೆಯಲ್ಲಿ ನೀರು ನಿಲ್ಲಿಸುವಂತೆ ಮಾಡಿ ಅಂತರ್ಜಲ ಹೆಚ್ಚಿಸುವಂತೆ ಮಾಡಬೇಕಾಗಿದೆ ಎಂದರು. ಸಂಘಟನೆಯ ಗಜೇಂದ್ರ, ಶ್ರೀನಿವಾಸ್, ಮುನಿಸ್ವಾಮಿ, ವೆಂಕಟೇಶ್, ಸುರೇಶ್, ಮಂಜುನಾಥ್ ಇದ್ದರು.