ಮನತಣಿಸಿದ ಸಂಕ್ರಾಂತಿ ಕವಿಗೋಷ್ಠಿ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಗರದ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಸಂಕ್ರಾಂತಿಯ ಸೊಗಡು ಮೂಡಿಬಂದು ಕಾವ್ಯಾಸಕ್ತರ ಮನತಣಿಸಿತು.
ಉಭಯ ಜಿಲ್ಲೆಗಳ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳು ವಾಚಿಸಿದ ಬಹುತೇಕ ಕವನಗಳು ಸಂಕ್ರಾಂತಿಯ ವಿಶೇಷತೆಗಳನ್ನು ಬಿಂಬಿಸಿದವು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎನ್. ರಮಣಾರೆಡ್ಡಿ, ಚು.ಸಾ.ಪ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ ಮಾತನಾಡಿದರು.
ಕೆ.ವಿ. ನಾಗಸುಬ್ರಮಣ್ಯಂ, ಎನ್.ವಿ. ಶ್ರೀನಿವಾಸನ್, ತೌಡನಹಳ್ಳಿ ಶಿವನರಸಿಂಹಯ್ಯ, ಎನ್. ಅರುಣ, ಕಾಂತಮ್ಮ, ಸೀತಮ್ಮ, ಶ್ರೀನಿವಾಸರೆಡ್ಡಿ, ವಿ. ಚಲಪತಿ, ರಾಜೇಶ್, ರಾಜಮ್ಮ, ಸಿ. ವೆಂಕಟರವಣಪ್ಪ, ಕೆ.ಎಸ್. ನೂರುಲ್ಲಾ, ಭೋಜರಾಜ, ಕೆ.ಎನ್. ಅಕ್ರಂಪಾಷ, ಮಂಜುನಾಥ್, ವಿ. ಚನ್ನಕೃಷ್ಣ, ತಿರುಮಲ ಪ್ರಕಾಶ್, ಸೀಕಲ್ ನರಸಿಂಹಪ್ಪ ಸ್ವರಚಿತ ಕವನ ವಾಚಿಸಿದರು.