ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿದ್ಯಾರ್ಥಿಗಳಿಗೆ ಏಕಾಗ್ರತೆ ಮುಖ್ಯ

Rashmi Kasaragodu
Updated On : 24 Jan 2014, 2:23 am

ಗೌರಿಬಿದನೂರು: ಗ್ರಾಮೀಣ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಏಕಾಗ್ರತೆ, ಶಿಸ್ತು ಮತ್ತು ಸತತ ಅಭ್ಯಾಸ ಮುಖ್ಯ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಪ ನಿರ್ದೇಶಕ ಎಂ. ಪುಟ್ಟಮಾದಯ್ಯ ತಿಳಿಸಿದರು.
ಮಂಚೇನಹಳ್ಳಿ ರಾಷ್ಟ್ರೀಯ ಗ್ರಾಮ ವಿದ್ಯಾ ಸಂಘದ  ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಲೆ ಮತ್ತು ಕಾಲೇಜು ವಿಭಾಗದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಾಂಶುಪಾಲ ಕೋಡಿರಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ವಿವೇಕಾನಂದ ಮತ್ತು ಅಬ್ದುಲ್ ಕಲಾಂರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಜಿಪಂ ಮಾಜಿ ಸದಸ್ಯ ಕೆ.ವಿ. ಹನುಮಪ್ಪರೆಡ್ಡಿ ಮತನಾಡಿದರು.
ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಎಂ.ಎನ್. ಗುರುಶಂಕರಯ್ಯ, ಕಾಲೇಜು ಪ್ರಾಂಶುಪಾಲ ಎಸ್.ನಂಜುಂಡ, ಉಪ ಪ್ರಾಂಶುಪಾಲ ನಾಗರಾಜ್ರಾವ್, ಎಂ.ಜಿ ರಂಗಪ್ಪ, ಆರ್.ಎಂ. ನಾರಾಯಣಗೌಡ, ಹಿರಿಯ ಶಿಕ್ಷಕ ಎಸ್.ವಿ. ವೆಂಕಟೇಶ್ ಮೂರ್ತಿ, ಡಿ.ಪಿ. ಕಾಂತರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement