ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಣ್ಣ ಮಠಗಳಿಗೆ ಆರ್ಥಿಕ ಸಹಾಯ ತಪ್ಪಲ್ಲ: ಆಂಜನೇಯ ಸಮರ್ಥನೆ

Rashmi Kasaragodu
Updated On : 25 Jan 2014, 2:00 am

ಕೋಲಾರ: ಬಿಜೆಪಿ ಸರ್ಕಾರವಿದ್ದಾಗ ದೊಡ್ಡ ಮಠಗಳಿಗೆ, ಉಳ್ಳವರಿಗೆ ಆರ್ಥಿಕ ಸಹಾಯ ಮಾಡಿತ್ತು. ನಮ್ಮ ಸರ್ಕಾರ ಸಣ್ಣ ಮಠಗಳಿಗೆ ಸಹಾಯ ಮಾಡುವ ಉತ್ತಮ ಧ್ಯೇಯ ಹೊಂದಿರುವವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಠಗಳಿಗೆ ಹಣ ನೀಡುವುದನ್ನು ಸಮರ್ಥಿಸಿಕೊಂಡರು.
ತಾಲೂಕಿನ ಮದನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಣ್ಣ ಸಮುದಾಯದ ಮಠಗಳ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ನೀಡಲು ಉದ್ದೇಶಿಸಿದ್ದು ಇದು ತಪ್ಪಿಲ್ಲವೆಂದರು.
ಸ್ವಾಮಿಗಳು ಜಮೀನು ಇದ್ದು ಶಾಲೆ ತೆರೆದು ಮೂಲ ಸೌಲಭ್ಯ ಒದಗಿಸಲಾಗದೆ ಇರುವುದರಿಂದ ಅಂತಹವರನ್ನು ಗುರುತಿಸಿ ಶಾಲೆ ಕಟ್ಟಡ, ಬಿಡಾರ ನಿರ್ಮಿಸಲು ಹಣ ನೀಡುವುದರಲ್ಲಿ ತಪ್ಪಿಲ್ಲ ಎಂದರು. ನಾನು ಮೂಲತಃ ಬುದ್ಧ, ಬಸವ, ಗಾಂಧಿ , ಅಂಬೇಡ್ಕರ್ ವಾದಿ. ನಮಗೆ ವಾಸ್ತುವಿನಲ್ಲಿ ನಂಬಿಕೆ ಇಲ್ಲ, ಇಲ್ಲಿಯವರೆಗೆ ನನ್ನ ಕೈಯನ್ನು ಯಾವ ಗಿಣಿ ಶಾಸ್ತ್ರ, ಭವಿಷ್ಯ ಹೇಳುವವನಲ್ಲಿ ತೋರಿಸಿದವನಲ್ಲ. ನನ್ನ ಭವಿಷ್ಯ ಬರೆದವರು ಜನ. ಇವರೇ ನನ್ನ ದೇವರು ಎಂದು ವ್ಯಾಖ್ಯಾನ ಮಾಡಿದರು.
ವಿಧಾನಸೌಧ ಕಟ್ಟಿಸಿದ್ದು ಕೆಂಗಲ್ ಹನುಮಂತರಾಯ, ಅದರ ಎಂಜನಿಯರ್ ಮಾಣಿಕ್ಯಂ ಎಂಬುವರು. ವಿಧಾನಸೌಧ ಕನ್ನಡಿಗರ ಶಕ್ತಿ ಕೇಂದ್ರವಾಗಿದ್ದು ಈ ಕೇಂದ್ರದ ಗೋಡೆ ಮೇಲೆ ಒಂದು ಸುತ್ತಿಗೆ ಏಟು ಹಾಕಲೂ ಬಿಡಲ್ಲ. ನಾನು ಎಲ್ಲೂ ಗೋಡೆ ಒಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement