ಶಿಡ್ಲಘಟ್ಟದಲ್ಲಿ...
ಶಿಡ್ಲಘಟ್ಟ: ಆಶಾ ಅಂದ ಮಕ್ಕಳ ಶಾಲೆಯಲ್ಲಿ 65ನೇ ಗಣರಾಜ್ಯೋತ್ಸವದ ದ್ವಜಾರೋಹಣವನ್ನು ಗೋಪಾಲಸಿಂಗ್ ನೆರವೇರಿಸಿದರು.
ಹಿರಯ ಪತ್ರಕರ್ತ ರೂಪಸಿ ರಮೇಶ್ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಕೀಲ ರವೀದ್ರನಾಥ್ ಮಾತನಾಡಿ, 562 ಸಂಸ್ಥಾನಗಳನ್ನು ಒಗ್ಗೂಡಿಸಿದ ಕೀರ್ತಿಸರ್ದಾರ್ ವಲ್ಲಭಬಾಯ್ ಪಟೇಲರಿಗೆ ಸಲ್ಲುತ್ತದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ವಿ.ಎಂ. ನಾಗರಾಜಯ್ಯ. ಬೈರಪ್ಪ, ಗೋಪಾಲಯ್ಯ ಇದ್ದರು.
ಕೆಜಿಎಫ್ನಲ್ಲಿ....
ಕೆಜಿಎಫ್: ದೇಶದ ಸಮಸ್ತರು ಸಂವಿಧಾನ ಹಾಗೂ ಕಾನೂನಿನ ಅರಿವು ಪಡೆದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಶಾಸಕಿ ವೈ. ರಾಮಕ್ಕ ಹೇಳಿದರು. ನಗರಸಭಾ ಮೈದಾನದಲ್ಲಿ ಆಯೋಜಿಸಿದ್ದ 65ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ಕಳೆದ 67 ವರ್ಷಗಳಲ್ಲಿ ಮಹಾತ್ಮಗಾಂಧೀಜಿ, ಜವಾಹರ್ಲಾಲ್ ನೆಹರು, ಲಾಲ್ಬಹದ್ದೂರು ಶಾಸ್ತ್ರೀ, ಅಟಲ್ ಬಿಹಾರಿ ವಾಜಪೇಯಿ ಮುಂತಾದ ಮಹಾನ್ ನಾಯಕರನ್ನು ದೇಶ ಕಂಡಿದ್ದು ಇಂತಹ ಮಹಾನ್ ವ್ಯಕ್ತಿಗಳ ತತ್ವ ಸಿದ್ದಾಂತಗಳೇ ನಮಗೆ ದಾರಿ ದೀಪ ಎಂದರು. ಕ್ಷೇತ್ರದ ಅಭಿವೃದ್ಧಿಗೆ ರು. 83.5 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್, ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಂಡು ಗಣರಾಜ್ಯೋತ್ಸವದ ಮೌಲ್ಯ ರಕ್ಷಿಸಬೇಕು ಎಂದರು.
ಇದೇ ವೇಳೆ ಗೃಹರಕ್ಷಕ ದಳ ಬೋಧಕ ಕೃಷ್ಣ ಎಂಬವರಿಗೆ ರಾಷ್ಟ್ರಪತಿ ಪದಕ ದೊರೆತ ಹಿನ್ನಲೆಯಲ್ಲಿ ಅವರನ್ನು ವೇದಿಕೆಯಲ್ಲಿ ಗಣ್ಯರಿಂದ ಸನ್ಮಾನ ಮಾಡಿ ಗೌರವಿಸಿದರು. ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ. ವಿವೇಕಾನಂದ, ವಿಶೇಷ ತಹಸೀಲ್ದಾರ್ ಜಿ. ವೆಂಕಟರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಕೃಷ್ಣಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರಿ ಆಯುಕ್ತ ಭೀಮನೀಡಿ, ನಗರಸಭೆ ಪೌರಾಯುಕ್ತ ವಿ. ಬಾಲಚಂದ್ರ, ಸ್ವಾತಂತ್ರ್ಯ ಹೋರಾಟಗಾರರು ಹಾಜರಿದ್ದರು. ಪೊಲೀಸ್, ಹೋಮ್ಗಾರ್ಡ್, ಎನ್ಸಿಸಿ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ, ಕವಾಯತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಂಗಾರಪೇಟೆಯಲ್ಲಿ...
ಬಂಗಾರಪೇಟೆ: ಭಾರತವನ್ನು ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ರೂಪಿಸಲು ದೃಢ ನಿರ್ಧಾರ ಮಾಡುವುದರೊಂದಿಗೆ ಸಮಗ್ರತೆಯನ್ನು ಎತ್ತಿ ಹಿಡಿಯುವ ಸಂಕಲ್ಪ ಮಾಡಬೇಕು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಮಾದರಿ ಸರ್ಕಾರಿ ಬಾಲಕರ ಶಾಲೆ ಮೈದಾನದಲ್ಲಿ ತಾಲೂಕು ಆಡಳಿತದವತಿಯಿಂದ ಹಮ್ಮಿಕೊಂಡಿದ್ದ 65ನೇ ಗಣರಾಜ್ಯೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು.