ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ

Rashmi Kasaragodu
Updated On : 27 Jan 2014, 1:45 am

ಮಾಲೂರು: ಕರ್ನಾಟಕ ಕಂಡ ಅಪ್ರತಿಮ ಸಾಹಸಿಗರಲ್ಲಿ ಸಂಗೊಳ್ಳಿ ರಾಯಣ್ಣ ಮುಂಚೂಣಿಯಲ್ಲಿದ್ದಾರೆ ಎಂದು ರಾಜ್ಯ ಕುರುಬರ ಸಂಘದ ನಿರ್ದೇಶಕ ಅಂಜನಿ ಸೋಮಣ್ಣ ಹೇಳಿದರು.
ಸ್ಥಳೀಯ ಕನಕ ಯುವ ಸೇನೆ ಸಂಗೂಳ್ಳಿ ರಾಯಣ್ಣ ಹುತಾತ್ಮ ದಿನದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಸಾರ್ವಜನಿಕ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಆಡಳಿತದಲ್ಲಿ ನಂಬಿಕಸ್ತ ಸಿಪಾಯಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೂಳ್ಳಿ ರಾಯಣ್ಣರವರ ಕೆಚ್ಚು ಇಂದಿನ ಯುವಕರಿಗೆ ಮಾದರಿಯಾಗಬೇಕಾಗಿದೆ ಎಂದರು.
ಉಶೋಕ್ ಮಾತನಾಡಿ, ಸಂಗೂಳ್ಳಿ ರಾಯಣ್ಣ ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಭಯೋತ್ಪಾದನೆಯನ್ನು ದೇಶದಿಂದ ಹೂರಗಟ್ಟಲು ಸಾಧ್ಯ ಎಂದರು. ವೇದಿಕೆಯ ಅಧ್ಯಕ್ಷ ತಿ. ದೇವರಾಜ್ ಮಾತನಾಡಿದರು. ಕಾರ್ಯಕ್ರಮದ ನಂತರ ಸರ್ಕಾರಿ ಆಸ್ವತ್ರೆಯ ರೋಗಿಗಳಿಗೆ ಬ್ರೆಡ್-ಹಣ್ಣು  ವಿತರಿಸದರು. ಪಟ್ಟಣದ ಕಾರಂಜಿ ಬಡಾವಣೆಯಲ್ಲಿ ಸಂಗೂಳ್ಳಿ ರಾಯಣ್ಣ ಹುತಾತ್ಮದಿನದ ಅಂಗವಾಗಿ ಬೆಂಗಳೂರಿನ ಕಂಪೇಗೌಡ ಮೆಡಿಕಲ್ ಸರ್ವಿಸ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಬಾಟಲು ರಕ್ತ ಸಂಗ್ರಹಿಸಲಾಯಿತು. ಎಂ.ವಿ. ಹನುಮಂತಯ್ಯ  ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕನಕ ಯುವ ಸೇನೆಯ ಅಧ್ಯಕ್ಷ ಎಂ.ಕೆ. ರವಿಚಂದ್ರ ಅಧ್ಯಕ್ಷತೆ ವಹಿಸಿದ್ದರು. ಎಟ್ಟುಕೋಡಿ ವೀರಭದ್ರಪ್ಪ, ಎಂ.ಎಸ್. ಸುಬ್ರಮಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement