ಸಂಚಾರಿ ನಿಯಮ ಕಡ್ಡಾಯವಾಗಿ ಪಾಲನೆ ಮಾಡಿ'
ಚಿಕ್ಕಬಳ್ಳಾಪುರ: ಸಂಚಾರಿ ನಿಯಮ ಕಡ್ಡಾಯವಾಗಿ ಪಾಲನೆ ಮಾಡಿ ಅಪಘಾತಗಳನ್ನು ತಪ್ಪಿಸುವ ಕುರಿತ ಕರಪತ್ರಗಳನ್ನು ಹಂಚುವ ಮೂಲಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸಿದರು. ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋನಿಂದ ಜಾಥಾ ಪ್ರಾರಂಭಿಸಿ ಪ್ರಮುಖ ರಸ್ತೆಗಳಲ್ಲಿ ಧ್ವನಿವರ್ಧಕ ಮತ್ತು ಕರಪತ್ರಗಳ ಮೂಲಕ ತಿಳಿ ಹೇಳಲಾಯಿತು. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಫೋನ್ಗಳನ್ನು ಬಳಸುವುದು ಮತ್ತು ಪ್ರಯಾಣಿಕರೊಂದಿಗೆ ಸಂಭಾಷಣೆ ಮಾಡಿಕೊಂಡು ವಾಹನ ಚಲಾಯಿಸಬಾರದು, ಪರಸ್ಪರ ಸಂಚರಿಸುವಾಗ ವಾಹನಗಳ ನಡುವೆ ಅಂತರವನ್ನು ಕಾಪಾಡಿಕೊಳ್ಳಬೇಕು. ಕಿರಿದಾದ ರಸ್ತೆಗಳಿಲ್ಲಿ ಓವರ್ ಟೇಕ್ ಮಾಡಬಾರದು. ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ್, ಸಂಚಲನಾಧಿಕಾರಿ ಶಿವಪ್ರಕಾಶ್ ಇದ್ದರು.