ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸದಾನಂದಗೌಡರು ಜೋಕರ್ ಆಗದಿರಲಿ

Rashmi Kasaragodu
Updated On : 27 Jan 2014, 1:43 am

ಕೋಲಾರ: ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಸದಾನಂದಗೌಡರು ಹಿರಿಯ ರಾಜಕಾರಣಿ ಹೌದು. ಬೇರೊಬ್ಬರ ಬಗ್ಗೆ ಟೀಕೆ ಮಾಡುವಾಗ ಎಚ್ಚರವಹಿಸದಿದ್ದರೆ ಜನರ ಕಣ್ಣಿಗೆ ಜೋಕರ್ ಆಗಿ ಕಾಣುತ್ತಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಎತ್ತಿನ ಹೊಳೆ ಯೋಜನೆಗೆ ಜ.31ರಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಶಂಕುಸ್ಥಾಪನೆ ಮಾಡಲು ಸಿದ್ಧತೆ ನಡೆಸಿರುವ ಬಗ್ಗೆ ಸದಾನಂದಗೌಡರು ಇದೊಂದು ಚುನಾವಣೆ ಗಿಮಿಕ್ ಎಂದು ಮಾಡಿರುವ ಟೀಕೆ ಬಗ್ಗೆ ಪತ್ರಕರ್ತರು ಹೇಳಿದ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಸಾದನಂದಗೌಡರು ನಮ್ಮ ಜಿಲ್ಲೆಗೆ ಸೇರಿದವರಾಗಿದ್ದಾರೆ, ಎತ್ತಿನ ಹೊಳೆ ಯೋಜನೆ ಯಾರ ಕಾಲದಲ್ಲಿ ಪ್ರಸ್ತಾಪವಾಯಿತು ಎಂಬುದು ಅವರಿಗೆ ಗೊತ್ತಿದೆ, ವೀರಪ್ಪ ಮೊಯ್ಲಿಯವರು ಪರಮಶಿವಯ್ಯ ವರದಿಯ ವಿರೋಧಿಯಲ್ಲ, ತಾಂತ್ರಿಕ ಕಾರಣಗಳಿಂದ ವರದಿ ಅನುಷ್ಠಾನಕ್ಕೆ ಸಮಸ್ಯೆ ಆಗುತ್ತಿರುವ ಹಿನ್ನಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಪರ್ಯಾಯ ಯೋಜನೆಯಡಿ ಅದಷ್ಟು ಬೇಗ ನೀರು ಒದಗಿಸಬೇಕೆಂಬ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ಜಾರಿಗೆ ಮುಂದಾಗಿದ್ದಾರೆಂದು ಸ್ಪಷ್ಟನೆ ನೀಡಿದರು.
ವೀರಪ್ಪ ಮೊಯ್ಲಿ ಅವರು ಹಿರಿಯ ರಾಜಕಾರಣಿ, ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದಾರೆ, ಎತ್ತಿನ ಹೊಳೆ ಯೋಜನೆ ಮೊಯ್ಲಿಯವರ ದೂರದೃಷ್ಟಿಯ ಯೋಜನೆ ಆಗಿದ್ದು ಕೆಲ ತಾಂತ್ರಿಕ ಸಮಸ್ಯೆಯಿಂದ ಶಂಕುಸ್ಥಾಪನೆ ಮುಂದೂಡಲಾಗಿದೆ, ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಫೆಬ್ರವರಿ ತಿಂಗಳೊಳಗೆ ಯೋಜನೆಗೆ ಚಾಲನೆ ಸಿಗಲಿದ್ದು ಜನತೆ ಯಾವುದೇ ಆತಂಕಪಡಬೇಕಾಗಿಲ್ಲವೆಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement