ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಸ್ಪತ್ರೆಯಲ್ಲಿ ಕುಡುಕನ ದಾಂಧಲೆ

Rashmi Kasaragodu
Updated On : 28 Jan 2014, 1:29 am

ಚಿಂತಾಮಣಿ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ರಕ್ಷಣೆ ಇಲ್ಲದ ಪರಿಣಾಮ ಕುಡಿದ ಅಮಲಿನಲ್ಲಿ ಯುವಕನೊಬ್ಬ ದಾಂಧಲೆ ನಡೆಸಿದ್ದಾನೆ. ರೋಗಿಗಳಿಗೆ ಪೊಲೀಸ್ ರಕ್ಷಣೆ ಇಲ್ಲದೆ ಪರದಾಡುವಂತಾಗಿದೆ ಎಂದು ನಾಗರಿಕರು ಆರೋರಿಸಿದ್ದಾರೆ.
ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯು ಜಿಲ್ಲೆಯಲ್ಲಿಯೇ ಮೇಲ್ದರ್ಜಗೇರಿದ ಧರ್ಮಾಸ್ಪತ್ರೆ ಎಂಬ ಖ್ಯಾತಿಗೆ ಒಳಪಟ್ಟಿದೆ. ಆದರೂ ಇಲ್ಲಿಗೆ ಬರುವ ರೋಗಿಗಳಿಗೆ ಮತ್ತು ಒಳ ರೋಗಿಗಳಿಗೆ ರಕ್ಷಣೆ ಇಲ್ಲದೆ ಇರುವುದು ತೊಂದರೆಯಾಗುತ್ತಿದೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ಯುವಕನೊಬ್ಬ ಕಂಠಪೂರ್ತಿ ಕುಡಿದು ಅವಾಚ್ಯ ಶಬ್ದಗಳಿಂದ ಬೈದು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದ ಗರ್ಭಿಣಿಯರು ಹಾಗೂ ಹೆರಿಗೆಗೆ ಬಂದವರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಪರಿಣಾಮ ರೋಗಿಗಳು ಮತ್ತು ನಾಗರಿಕರು ಭಯಬೀತರಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಡಾ.ಜಯಂತಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೋಲೀಸರು ತಡವಾಗಿ ಬಂದ ಪರಿಣಾಮ ಕುಡುಕ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement