ಕೃಷಿ ಮಾಹಿತಿ ಆಂದೋಲನಕ್ಕೆ ಚಾಲನೆ
ಗುಡಿಬಂಡೆ: ಸಮಗ್ರ ಕೃಷಿ ಹಾಗೂ ತೋಟಗಾರಿಕೆ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿಯ ಪಿ.ಆರ್.ಎಸ್ ತೋಟಗಾರಿಕೆ ಕ್ಷೇತ್ರದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮಕ್ಕೆ ಗುಡಿಬಂಡೆ ತಾಲೂಕಿನಿಂದ ಸುಮಾರು 200 ರೈತರು ಭಾಗವಹಿಸಿ ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನ, ಕೃಷಿ ಯಾಂತ್ರೀಕರಣ, ಪಶು ಸಂಗೋಪನೆ, ತೋಟಗಾರಿಕೆ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಜಂಟಿ ಕೃಷಿ ನಿರ್ದೇಸಕ ರಾಮದಾಸ್ ನೇತೃತ್ವದಲ್ಲಿ ಕೈಗೊಂಡ ಈ ಕಾರ್ಯಕ್ರಮಕ್ಕೆ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ಚಾಲನೆ ನೀಡಿದರು. ವಾಹಿನಿ ಅಭಿವೃದ್ಧಿ ಸಂಸ್ಥೆಯ ಸುರೇಶ್, ವಾಹಿನಿ ಸಂಸ್ಥೆಯ ಕ್ಷೇತ್ರಾಧಿಕಾರಿ ಚಲಪತಿ, ಕೃಷಿ ಅಧಿಕಾರಿ ಶಂಕರಯ್ಯ, ಭೂ ಚೇತನ ಇದ್ದರು.