ಚಿತ್ರಕಲಾ ಶಿಬಿರ
ಗುಡಿಬಂಡೆ: ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲಾ ಗ್ರಾಮದ ಸಮೀಪವಿರುವ ಆವುಲ ಬೆಟ್ಟದಲ್ಲಿ ನಿಸರ್ಗ ಚಿತ್ರಕಲಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರದ ಅಂತಿಮ ದಿನದಂದು ಚಿತ್ರಕಲಾ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಆಗಮಿಸಿ ಚಿತ್ರಗಳನ್ನು ವೀಕ್ಷಿಸಿದರು. ಈ ಸಂದರ್ಭಧಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೀಚಗನಾಹಳ್ಳಿ ಸಂತೋಷ್ ಕುಮಾರ್, ಗ್ರಾಮದ ಮುಖಂಡರಾದ ಎಂ.ವಿ.ಸೋಮಶೇಖರಯ್ಯ, ಮಾಪುಳ್ಳಾಚಾರ್, ಸಿ.ಎಲ್.ವೆಂಕಟೇಶ್, ಮೂರ್ತಿ, ಷಫಿಉಲ್ಲಾ ಇದ್ದರು.
ಅಪಘಾತ; ಇಬ್ಬರ ಸಾವು
ವಿಜಯಪುರ: ಪಟ್ಟಣದ ವೆಂಕಟಗಿರಿಕೋಟೆ ಕೆರೆ ಬಳಿ ಬೈಕ್ ಸವಾರ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಗೌರಿಬಿದನೂರು ತಾಲೂಕಿನ ಗೊಡ್ಲುಕುಂಟೆಯ ನಿವಾಸಿಗಳಾದ ಹರೀಶ್ (26)ಮತ್ತು ಆತನ ಸಹೋದರ ನರಸಿಂಹಚಾರ್ (24)ಚಿಕ್ಕಬಳ್ಳಾಪುರ ಮಾರ್ಗವಾಗಿ ದೇವನಹಳ್ಳಿ ಕಡೆ ಬರುತ್ತಿದ್ದಾಗ ವೆಂಕಟಗಿರಿಕೋಟೆಯ ಎನ್ಎಚ್-7 ರಾಷ್ಟ್ರಿಯ ಹೆದ್ದಾರಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟರು. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪಿಎಸ್ಐ ಶಿವಕುಮಾರ್ ತಿಳಿಸಿದ್ದಾರೆ.