ನೀರಿನ ತೊಟ್ಟಿಯಲ್ಲಿ ಬಿದ್ದು ವ್ಯಕ್ತಿ ಸಾವು
ಕೋಲಾರ: ನಗರದ ಅಮ್ಮವಾರಿಪೇಟೆಯ ತರಕಾರಿ ಮಾರುಕಟ್ಟೆ ಬಳಿ ಇರುವ ನೀರಿನ ತೊಟ್ಟಿಯಲ್ಲಿ ಅದೇ ಪ್ರದೇಶಕ್ಕೆ ಸೇರಿದ ಬಾಷ್ಯ (45) ಎಂಬವರು ಬಿದ್ದು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಡಿತದ ಚಟ ಹೊಂದಿದ್ದ ಭಾಷ್ಯ ಕುಡಿದ ಅಮಲಿನಲ್ಲಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮನೆಗೆ ಬಾಷ್ಯ ಬಂದಿರಲಿಲ್ಲವೆನ್ನಲಾಗಿದೆ.
ಸೋಮವಾರ ತೊಟ್ಟಿಯ ಬಳಿ ಕೊಳೆತ ಶವದ ವಾಸನೆಯಿಂದಾಗಿ ಸಾರ್ವಜನಿಕರು ತೊಟ್ಟಿಯ ಬಳಿ ಹೋಗಿ ನೋಡಿದಾಗ ಶವ ನೀರನಲ್ಲಿ ತೇಲಾಡುತ್ತಿದ್ದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಗಲ್ ಪೇಟೆಯ ಪಿಎಸ್ಐ ಲಿಯಾಖತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಶವವನ್ನು ತೊಟ್ಟಿಯಿಂದ ಹೊರ ತೆಗೆಸಿ ಶವ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ತನಿಖೆ ಮುಂದುವರೆಸಿದ್ದಾರೆ.