ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಫೆ.10 ರಂದು ಗುತ್ತಿಗೆದಾರರ ಸಭೆ

Rashmi Kasaragodu
Updated On : 28 Jan 2014, 1:22 am

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ನೋಂದಾಯಿತ ಗುತ್ತಿಗೆದಾರರಿಗೆ 1 ಲಕ್ಷ ವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆ ಆಧಾರದ ಮೇಲೆ ನೀಡಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ.
 ಜಿಪಂ ಎಂಜನಿಯರಿಂಗ್ ವಿಭಾಗದಿಂದ ಕುಡಿಯುವ ನೀರಿನ ಕಾಮಗಾರಿಗಳನ್ನು 5 ಲಕ್ಷ ವರೆಗೆ ತುಂಡು ಗುತ್ತಿಗೆ ನೀಡಬಹುದಾಗಿದ್ದು, ಇದರ ಬಗ್ಗೆ ಸೂಕ್ತ ತರಬೇತಿ ಅಗತ್ಯವಿರುವುದರಿಂದ ನೋಂದಾಯಿತ ದಲಿತ ವರ್ಗಕ್ಕೆ ಸೇರಿದ ಗುತ್ತಿಗೆದಾರರನ್ನು ಫೆ.10ರಂದು ಸೋಮವಾರ ಟಿ.ಚನ್ನಯ್ಯರಂಗ ಮಂದಿರದಲ್ಲಿ ಸೇರಿಸಿ ತರಬೇತಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿಗಳ ವೇತನ ಬಿಡುಗಡೆ ಮಾಡಿಲ್ಲ, ಖಾಸಗಿ ಶಾಲೆಗಳ ಮೇಲೆ ಇರುವ ಪ್ರೀತಿ ಸರ್ಕಾರಿ ಶಾಲೆಗಳ ಮೇಲೆ ಅಧಿಕಾರಿಗಳಿಗೆ ಇಲ್ಲ ಎಂದು ವೆಂಕಟಾಚಲಪತಿ ಆರೋಪಿಸಿದರು. ಸರ್ಕಾರಿ ವಿದ್ಯಾರ್ಥಿಗಳಿಗೆ ಮೊದಲು ವಿದ್ಯಾರ್ಥಿ ವೇತನ ನೀಡದೆ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದಾಗ ಜಿಲ್ಲಾಧಿಕಾರಿ ಕೂಡಲೇ ಬಾಕಿ ಇರುವ ಎಲ್ಲ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು. ಸಭೆಯಲ್ಲಿ ದಲಿತ ಮುಖಂಡರಾದ ಚಂದ್ರಶೇಖರ್, ಹಾರೋಹಳ್ಳಿ ನಾರಾಯಣಸ್ವಾಮಿ, ಮುನಿರಾಜು ಇನ್ನಿತರರು ಮಾತನಾಡಿ, ದಲಿತ ವರ್ಗಕ್ಕೆ ಸರ್ಕಾರದ ಸವಲತ್ತುಗಳು ಕ್ರಮಬದ್ಧವಾಗಿ ಹಾಗೂ ನ್ಯಾಯ ಸಮ್ಮತವಾಗಿ ಸಿಗುವಂತಾಗಬೇಕೆಂದರು.  ಜಿಪಂ ಸಿಇಒ ವಿನೋದ್ ಪ್ರಿಯ, ಕೋಲಾರ ಎಸ್ಪಿ ಡಾ. ರಾಮ್ನಿವಾಸ್ ಸಪೆಟ್, ಕೆಜಿಎಫ್ ಎಸ್ಪಿ ಡಾ. ರೋಹಣಿ ಕಚೋಟ್ ಸಪೆಟ್, ಉಪವಿಭಾಗಾಧಿಕಾರಿ ಮಂಜುನಾಥ್, ನಗರಸಭೆ ಆಯುಕ್ತ ಜಗದೀಶ್, ತಹಸೀಲ್ದಾರ್ ನಾಗರಾಜ್ ಸೇರಿದಂತೆ ಜಿಲ್ಲೆಯ ಇನ್ನಿತರ ತಾಲೂಕುಗಳ ತಹಸೀಲ್ದಾರ್ಗಳು, ತಾಪಂ ಇಒಗಳು, ಡಿಎಚ್ಓ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement