'ಸಂಘಟನೆ ಮೂಲಕ ಹೋರಾಡಿ'
ಮುಳಬಾಗಲು: ವಿದ್ಯಾರ್ಥಿ ಮತ್ತು ಯುವಜನರು ಸಂಘಟನೆ ಮೂಲಕ ಹೋರಾಟಕ್ಕೆ ಮುಂದಾದಲ್ಲಿ ಉತ್ತಮ ಫಲ ಸಿಗುವುದೆಂದು ಆಖಿಲ ಭಾರತ ಯುವಜನ ಫೆಡರೇಷನ್ ಕಾರ್ಯದರ್ಶಿ ಎ.ಎಸ್.ಮೋನಪ್ಪ ಹೇಳಿದರು.
ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಅಖಿಲ ಭಾರತ ಯುವಜನ ಫೆಡರೇಷನ್ ಹಾಗೂ ವಿದ್ಯಾರ್ಥಿ ಫೇಡರೇಷನ್ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಅವಿವೇಕಯುತವಾದ ಶಿಕ್ಷಣ ವ್ಯವಸ್ಥೆಯಿಂದಾಗಿ ಶಿಕ್ಷಣ ಪದ್ಧತಿ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನದಿಗಳಿಂದ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಿ ರೈತರು ಬೇಸಾಯ ಮಾಡಿ ಜೀವನ ರೂಪಿಸಿಕೊಳ್ಳಲು ಕರೆ ನೀಡಿದ ಅವರು ಕೃಷಿಕರ ಕುಟುಂಬಗಳಿಗೆ ಉನ್ನತ ಶಿಕ್ಷಣ ನೀಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ರಾಜ್ಯ ಸಿಪಿಐ ಸಹ ಸಂಚಾಲಕ ಸತೀಶ್, ಸುಂದರೇಶ್, ಎಐಎಸ್ಎಫ್ ರಾಜ್ಯ ಸಂಚಾಲಕ ಸಂತೋಷ್, ತಾಪಂ ಮಾಜಿ ಸದಸ್ಯ ಪುಣ್ಯಹಳ್ಳಿ ಶಂಕರ್, ಎ.ವಿ.ವೆಂಕಟರಾಮ್, ಸಂಗಸಂದ್ರ ರಾಮಚಂದ್ರ, ವಿದ್ಯಾರ್ಥಿ ಮುಖಂಡ ಮುನಿರಾಜು, ಎಂ.ಗೊಲ್ಲಹಳ್ಳಿ ಸುರೇಶ್, ಅನಂತಪುರ ಸುಭಾಶ್, ಬಂಗವಾದಿ ಎ.ಭಾಸ್ಕರ್, ವಿದ್ಯಾರ್ಥಿನಿ ಲಾವಣ್ಯ ಇದ್ದರು.