ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರಿಗಳ ವಿರುದ್ಧ ಅಧ್ಯಕ್ಷರ ಗರಂ

Mainashree
Updated On : 28 Jan 2014, 11:09 am

ಚಿಂತಾಮಣಿ: ತಾಲೂಕಿನ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದರೂ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ ಎಂದು ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಕಿಡಿಕಾರಿದರು.
ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತರಾಟೆಗೆ ತೆಗೆದುಕೊಂಡು, ಬೇಸಿಗೆಗೆ ಮುನ್ನವೇ ನೀರಿನ ಸಮಸ್ಯೆ ಎದುರಾಗಿದ್ದರೂ ಅಧಿಕಾರಿಗಳು ಪೂರ್ವ ಸಿದ್ಧತೆ ಕೈಗೊಳ್ಳದಿರುವುದರಿಂದ ಗ್ರಾಮೀಣ ಜನರು ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಆನೂರು ಗ್ರಾಪಂ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಕಳೆದ 3 ತಿಂಗಳ ಹಿಂದೆ ಕೊಳವೆ ಬಾವಿ ಕೊರೆಸಿ ನೀರಿದ್ದರೂ ಜಿಪಂ ಕಾರ್ಯಪಾಲಕ ಸಹಾಯಕ ಅಭಿಯಂತಕರು ಪಂಪು ಅಳವಡಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ಜಿಪಂ ಸದಸ್ಯೆ ಉಮಾದೇವಿ ಸಭೆಯಲ್ಲಿ ಆರೋಪ ಮಾಡಿದರು. ತಾಲೂಕಿನ ನಾರಾಯಣಹಳ್ಳಿಯಲ್ಲಿ ಶಾಸಕರ ಕುಮ್ಮಕ್ಕಿನಿಂದ ಹಲವರು ಕೊಳವೆ ಬಾವಿಯಲ್ಲಿ ನೀರಿದ್ದರೂ ಅದಕ್ಕೆ ಪಂಪು ಅಳವಡಿಸಲು ಪಿತೂರಿ ಮಾಡುತ್ತಿರುವುದಾಗಿ ತಾಪಂ ಸದಸ್ಯ ಸುಲ್ತಾನ್ ಷರೀಪ್ ಆರೋಪಿಸಿದರು. ಇದರಿಂದ ಸಭೆಯಲ್ಲಿ ಅಧಿಕಾರಿಗಳು ಸಮರ್ಪಕ ಉತ್ತರ ನೀಡದೆ ಗೊಂದಲಮಯವಾಯಿತು.
ತೂಕದಲ್ಲಿ ಮೋಸ: ಸಾಮಾನ್ಯ ಸಭೆಯಲ್ಲಿ ಅಕ್ಷರ ದಾಸೋಹ ಅಧಿಕಾರಿ ರಾಮಕೃಷ್ಣಪ್ಪ ತಾಲೂಕಿನ ಶಾಲೆಗಳಿಗೆ ವಿತರಿಸುವ ಆಹಾರ ಪದಾರ್ಥಗಳು ಕಳಪೆಯಿಂದ ಕೂಡಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವ ಬಗ್ಗೆ ಹಲವು ತಾಪಂ ಸದಸ್ಯರ ಕೆಂಗಣ್ಣಿಗೆ ಗುರಿಯಾದರು.
ತಾಪಂ ಅಧ್ಯಕ್ಷ ಗೌರಮ್ಮನಾಗೇಶ್, ಉಪಾಧ್ಯಕ್ಷ ನಾಗರಾಜ್, ಜಿಪಂ ಸದಸ್ಯ ವೀಣಾಗಂಗುಲಪ್ಪ, ತಾಪಂ ಸದಸ್ಯ ಶೇಖರ್ ಬಾಬು, ಸ್ಕೂಲ್ ಸುಬ್ಬರೆಡ್ಡಿ, ರೆಡ್ಡೆಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement