ಕೈಗೆ ಸಿಗದ ಅಧಿಕಾರಿಗಳು; ಜನಪ್ರತಿನಿಧಿಗಳ ಗರಂ
ಚಿಂತಾಮಣಿ: ತಾಪಂ ಇಒ, ಹಲವು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಜನಸಾಮಾನ್ಯರಿಗೆ ಕಚೇರಿಗಳಲ್ಲಿ ದೊರೆಯದೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ತಾಪಂ ಅಧ್ಯಕ್ಷೆ ಗೌರಮ್ಮನಾಗೇಶ್, ಉಪಾಧ್ಯಕ್ಷ ನಾಗರಾಜ್ ಆರೋಪಿಸಿದ್ದಾರೆ.
ನಗರದ ತಾಪಂ ಸಭಾಂಗಣದಲ್ಲಿ ಮಾತನಾಡಿ, ಖಾತ್ರಿ ಯೋಜನೆಯ ಅನುದಾನದ ಬಗ್ಗೆ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಗಮನಕ್ಕೆ ತರದೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ವಿತರಣೆ ಮಾಡದೆ ಜನಸಾಮಾನ್ಯರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆಂದು ಆರೋಪಿಸಿದರು.
ಈ ಬಗ್ಗೆ ಲಿಖಿತ ದೂರುಗಳು ಬಂದಿರುವುದು ಕಂಡು ಜನಪ್ರತಿನಿಧಿಗಳಾದ ನಮಗೆ ತೀವ್ರ ಬೇಸರ ಉಂಟಾಗಿದೆಯೆಂದು ಆರೋಪಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಚಿಕ್ಕಬಳ್ಳಾಪುರ ಜಿಪಂ ಸಿಇಒಗೆ ಇವರ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ.