ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ರಾಂತಿಕುಮಾರ್ ದಾಖಲೆ ಲೋಕಾಯುಕ್ತ ಪರಿಶೀಲನೆ

Mainashree
Updated On : 28 Jan 2014, 11:11 am

ಮುಳಬಾಗಲು: ಬಗರ್ ಹುಕುಂ ಸಾಗುವಳಿ ಜಮೀನು ಮಂಜೂರು ಮಾಡುವಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂಬ ಆರೋಪದ ಹಿನ್ನಲೆಯಲ್ಲಿ ಕೋಲಾರ ಲೋಕಾಯುಕ್ತ ಪೊಲೀಸರು ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಪ್ರಥಮ ದರ್ಜೆ ಗುಮಾಸ್ತ ಕ್ರಾಂತಿಕುಮಾರ್ ಎಂಬವರ ಮುಳಬಾಗಲು ಮನೆಯಲ್ಲಿ ದಾಖಲಾತಿಗಳನ್ನು ವಶಪಡಿಸಿಕೊಂಡಿರುವುದು  ವರದಿಯಾಗಿದೆ.
ಮಧ್ಯಾಹ್ನ 1ರಿಂದ ಸಂಜೆಯವರೆವಿಗೂ ಪರಿಶೀಲನೆ ನಡೆಸಲಾಯಿತು. ಕ್ರಾಂತಿ ಕುಮಾರ್ ಬಂಗಾರುಪೇಟೆ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸಿ ಸುಮಾರು ಎರಡೂವರೆ ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ. ಬಂಗಾರುಪೇಟೆಯಲ್ಲಿ 8 ವರ್ಷಗಳ ಕಾಲ ಕರ್ತವ್ಯದಲ್ಲಿದ್ದಾಗ ಬಗರ್ ಹುಕಂ ಸಾಗುವಳಿ ಜಮೀನು ಮಂಜೂರು ಮಾಡುವಲ್ಲಿ ಅನರ್ಹರಿಂದ ತಲಾ ಇಪ್ಪತ್ತು ಸಾವಿರ ರು.ಗಳನ್ನು ಪಡೆದು ಅರ್ಜಿ ಸ್ವೀಕೃತಿ ಪತ್ರ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಲೋಕಾಯುಕ್ತ ಡಿವೈಎಸ್ಪಿ ರಾಮಮೂರ್ತಿ, ಇನ್ಸ್‌ಪೆಕ್ಟರ್ ಅಶ್ವತ್ಥನಾರಾಯಣಸ್ವಾಮಿ, ಸಿಬ್ಬಂದಿ ರಾಮಚಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement