'ಗ್ರಾಹಕರ ಜೊತೆ ಸೌಜನ್ಯದಿಂದ ವರ್ತಿಸಿ'
ಶ್ರೀನಿವಾಸಪುರ: ಬರ ಪೀಡಿತ ತಾಲೂಕಿನಲ್ಲಿ ಜನರು ಬದುಕಬೇಕಾದರೆ ಬ್ಯಾಂಕುಗಳು ಸಾಲ ನೀಡಿ ಸ್ಪಂದಿಸುವ ಬದಲು ಬ್ಯಾಂಕಿಗೆ ಬರುವ ಗ್ರಾಹಕರ ಮೇಲೆ ದೌರ್ಜನ್ಯ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಕಿಡಿಕಾರಿದರು.
ಪಟ್ಟಣದ ಮಿಲನ್ ಸ್ಟಾರ್ ಮಾವಿನ ಕಾಯಿ ಮಂಡಿಯಲ್ಲಿ ಲೀಡ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಜಂಟಿಯಾಗಿ ಆಯೋಜಿಸಿದ್ದ ಬ್ಯಾಂಕ್ ಗ್ರಾಹಕರ ಸಭೆಯಲ್ಲಿ ಮಾತನಾಡಿ, ದೇಶ ಅಭಿವೃದ್ಧಿಯಾಗಬೇಕಾದರೆ ಬ್ಯಾಂಕುಗಳು ರೈತರಿಗೆ ಸಾಲ ನೀಡಬೇಕು ಗ್ರಾಹಕರ ತೆಗೆದುಕೊಂಡ ಸಾಲ ಮರುಪಾವತಿ ಮಾಡಿದರೆ ಬೇರೆ ಸಾಲಗಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಬ್ಯಾಂಕುಗಳಿಂದ ರೈತರಿಗೆ, ಕೂಲಿ ಕಾರ್ಮಿಕರಿಗೆ ಸಾಲ ಮಂಜೂರಾತಿ ಆದೇಶ ಪತ್ರಗಳನ್ನು ವಿತರಣೆ ಮಾಡಿದರು. ಎಸ್ಬಿಎಂ ಜನರಲ್ಮ್ಯಾನೇಜರ್ ದಾಮೋಧರ್ ಮೊರ್ಲ, ಎನ್.ಜಿ. ಬ್ಯಾಟಪ್ಪ, ಅಲೆಕ್ಜಾಂಡರ್, ಡಿಸೋಜಾ, ಆಖಿಲ್ಕುಮಾರ್ ಮಾತನಾಡಿದರು. ತಹಸೀಲ್ದಾರ್ ಎಚ್. ಜಯ ಪುರಸಭೆ ಮುಖ್ಯಾಧಿಕಾರಿ ರೇಣುಕಾ, ಕೆನರಾ ಬ್ಯಾಂಕ್ ಜನರಲ್ಮ್ಯಾನೇಜರ್ ಸಂಪತ್ ಕುಮಾರ್ ಇದ್ದರು.