ಬಾಲ್ಯ ವಿವಾಹ ತಡೆಗೆ ಪಾಲಕರ ಸಹಕಾರ ಅಗತ್ಯ
ಮಾಲೂರು: ಬಾಲ್ಯ ವಿವಾಹ ನಿವಾರಣೆಗೆ ಪಾಲಕರು ಸಹಕರಿಸಿ ಅನಾಗರಿಕ ಪಿಡುಗಿಗೆ ಶ್ರೀಕಾರ ಹಾಡಬೇಕು ಎಂದು ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣೆ ತಡೆಗಟ್ಟಲು ತಾಲೂಕು ಮಟ್ಟದ ಆಂದೋಲನ ಹಾಗೂ ಬ್ಯಾಲ ವಿವಾಹ ನಿಷೇಧ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ಈ ಬಗ್ಗೆ ಪಾಲಕರು ಸೇರಿದಂತೆ ಸಂಘ-ಸಂಸ್ಥೆಗಳು ಕೈ ಜೋಡಿಸಿ ಕಲಸ ಮಾಡಬೇಕಾಗಿದೆ. ಈ ಬಗ್ಗೆ ಮಹಿಳೆಯರು ಸ್ವಯಂಯಾಗಿ ಹೆಚ್ಚಿನ ಜಾಗೃತರಾಗಬೇಕಾಗಿದೆ ಎಂದರು. ಸಾದಿಕ್ ಖುರೇಷಿ, ರಮೇಶ್, ವಿಜಯಲಕ್ಷ್ಮಿ, ಜಯಶ್ರೀ, ವಿಮಲಮ್ಮ, ವಿಜಯಕುಮಾರಿ, ಮಂಜುಳಾ, ವಿಜಿಯಮ್ಮ, ಜಯಮ್ಮ, ಇದ್ದರು.