ಭ್ರಷ್ಟಾಚಾರ ಅಭಿವೃದ್ಧಿಗೆ ಮಾರಕ: ಶಿವಶಂಕರರೆಡ್ಡಿ
ಗೌರಿಬಿದನೂರು: ಭ್ರಷ್ಟಾಚಾರ ಪಿಡುಗುನಿಂದ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಉಪಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ ವಿಷಾದ ವ್ಯಕ್ತ ಪಡಿಸಿದರು.
ಎಸ್‌ಎಸ್‌ಇಎ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 65ನೇ ಗಣರಾಜ್ಯೋತ್ಸವದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ಸಂವಿಧಾನದ ಮೂಲ ಉದ್ದೇಶ ಅಸ್ಪೃಶ್ಯತೆ, ಬಡತನ, ಸಾಮಾಜಿಕ ಪಿಡುಗುಗಳಿಂದ ಜರ್ಜರಿತವಾದ ಜನತೆಗೆ ಸಮಾನತೆ ಮತ್ತು ಬಾತೃತ್ವವನ್ನು ದೊರಕಿಸಿಕೊಡುವುದು ಆಗಿದ್ದು ಕೃಷಿ, ಕೈಗಾರಿಕಾ, ತಾಂತ್ರಿಕದಲ್ಲಿ ವಿಶ್ವವನ್ನೇ ಗಮನಸೆಳೆದಿರುವುದು ಶ್ಲಾಘನೀಯ ಸಂಗತಿ ಎಂದರು. ತಾಲೂಕು ದಂಡಾಧಿಕಾರಿ ಡಾ.ಎನ್. ಭಾಸ್ಕರ್ ಅವರು ಪ್ರಸ್ಥಾವಿಕ ಭಾಷಣ ಮಾಡಿ, ಸಂವಿಧಾನದಲ್ಲಿ ಸರ್ಕಾರದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯ ಕ್ಷೇತ್ರಗಳನ್ನು ನಿಗದಿಪಡಿಸಿ ಅವು ತಮ್ಮ ಕರ್ತವ್ಯ ನಿರ್ವಹಿಸಲು ಅನುವುವ ಾಡಿಕೊಟ್ಟಿದೆ ಎಂದರು. ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ವೃತ್ತ ನಿರೀಕ್ಷಕ ಕೆ. ನಾಗರಾಜ್, ಬಿಇಒ ಭಯ್ಯಪ್ಪರೆಡ್ಡಿ, ತಾಪಂ ಸದಸ್ಯರು, ಜಿಪಂ ಸದಸ್ಯರು ಹಾಗೂ ಪುರಸಭಾ ಸದಸ್ಯರು ಭಾಗವಹಿಸಿದ್ದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.