ಮತದಾರರ ದಿನಾಚರಣೆ
ಶಿಡ್ಲಘಛಟ್ಟ: ಗುಣ್ಮಾತಕ ಅಂಶ ನೋಡಿ ಮತ ಚಲಾಯಿಸಿ ಎಂದು ಸಿವಿಲ್ನ್ಯಾಯಧೀಶರಾದ ಎಸ್. ಮಹೇಶ್ ಹೇಳಿದರು. ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿ, ಅನಕ್ಷರಸ್ಥರಿಗಿಂತ ಅಕ್ಷರಸ್ಥರು ಜಾತಿ ನೋಡಿ ಮತ ಹಾಕುತ್ತಿದ್ದಾರೆ ಎಂದು ವರದಿ ಮಾಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಶೇ.43 ರಷ್ಟು, ನಗರ ಪ್ರದೇಶಗಳಲ್ಲಿ ಶೇ.37 ರಷ್ಟು, ಗಂಡಸರಲ್ಲಿ ಶೇ.43 ರಷ್ಟು, ಹೆಂಗಸರಲ್ಲಿ ಶೇ.37 ರಷ್ಟು ಮಂದಿ ಜಾತಿ ನೋಡಿ ಮತದಾನ ಮಾಡುತ್ತಿದ್ದಾರೆಂದು ವರಿದಿ ತಿಳಿಸಿದೆ ಎಂದು ತಿಳಿಸಿದರು.
ತಹಸಿಲ್ದಾರ್ ನಾರಾಯಣಸ್ವಾಮಿ ಮಾತನಾಡಿ, ಭಾರತ ಚುನಾವಣಾ ಆಯೋಗ ಮತದಾರರಿಗೆ ಜಾಗೃತಿ ಮೂಡಿಸುವುದಕ್ಕಾಗಿ ರಾಷ್ಟ್ರೀಯ ಮತದಾರರ ಚುನಾವಣೆ ಆಚರಣೆ ಮಾಡುತ್ತಿದ್ದು, ಮತದಾನದ ಹಕ್ಕನ್ನು ಸರಿಯಾಗಿ ಉಪಯೋಗಿಸಿಕೊಂಡು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮತದಾರರು ಪ್ರತಿಜ್ಞಾ ವಿದಿ ಸ್ವೀಕರಿಸಿದರು. 18 ವರ್ಷ ತುಂಬಿದ್ದು ಮತದಾರರಾಗಿ ನೋಂದಣಿಯಾದವರಿಗೆ ಗುರುತಿನ ಕಾರ್ಡ್ ವಿತರಿಸಲಾಯಿತು. ಸೆಕೆಂಡ್ ಗ್ರೇಡ್ ತಹಸೀಲ್ದಾರ್ ರಮೇಶ್, ವೃತ್ತ ನಿರೀಕ್ಷಕ ಶ್ರೀನಿವಾಸ ಮೂರ್ತಿ, ಪುರ ಠಾಣೆ ಪಿಎಸ್ಐ ಪುರುಷೋತ್ತಮ್ ಇದ್ದರು.