ಅಕ್ರಮವಾಗಿ ನೀರು ಬಳಕೆ; 5 ಮೋಟಾರ್ ವಶ
ಮಾಲೂರು: ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ನೇತೃತ್ವದ ತಂಡ ದಿಡೀರ್ ಧಾಳಿ ನಡೆಸಿ ಇಲ್ಲಿನ ದೊಡ್ಡ ಕೆರೆಗೆ ಹರಿಯುತ್ತಿದ್ದ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದ ರೈತರ 5 ಮೋಟಾರ್ಗಳನ್ನು ವಶಪಡಿಸಿಕೊಂಡಿರುವ ಘಟನೆ ಬುಧವಾರ ನಡೆದಿದೆ. ದೊಡ್ಡ ಕೆರೆಗೆ ರಾಜಕಾಲುವೆ ಮೂಲಕ ಹರಿಯಬೇಕಾದ ನೀರನ್ನು ಕೆಲವು ರೈತರು ಅಕ್ರಮವಾಗಿ ಮೋಟಾರ್ ಆಳವಡಿಸಿ ಬಳಸುತ್ತಿದ್ದಾರೆ ಎಂಬ ಸಾರ್ವಜನಿಕರ ದೂರನ ಮೇರೆಗೆ ತಹಸೀಲ್ದಾರ್ ಡಾ. ಸುಧಾ ಹಾಗೂ ಪುರಸಭೆ ಮುಖ್ಯಾಧಿಕಾರಿ ರೇಣುಕಾರವರ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಗ್ರಹಾರ ಬೀದಿ ಹಾಗೂ ಧರ್ಮರಾಯ ದೇವಾಲಯದ ಹಿಂಭಾಗದಲ್ಲಿ ನೀರೆತ್ತಲು ಆಳವಡಿಸಿದ್ದ 5 ಮೋಟಾರ್ಗಳನ್ನು ವಶಪಡಿಸಿಕೊಂಡು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕಂದಾಯ ಅಧಿಕಾರಿ ಬೀರಪ್ಪ, ಆರೋಗ್ಯಾಧಿಕಾರಿ ರಾಜಣ್ಣ, ಉದಯ್,ದೇವರಾಜ್ ಇದ್ದರು.