ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೇಂದ್ರ ರೇಷ್ಮೆ ಮಂಡಳಿ ಸದಸ್ಯರ ಆಯ್ಕೆ

Rashmi Kasaragodu
Updated On : 30 Jan 2014, 1:42 am

ಚಿಕ್ಕಬಳ್ಳಾಪುರ: ಕೇಂದ್ರ ರೇಷ್ಮೆ ಮಂಡಳಿ ಸದಸ್ಯರನ್ನಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ರೈತ ಮುಖಂಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಹಳ್ಳಿ ಎನ್. ರಮೇಶ್ರನ್ನು ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಸೀತಾರಾಮ ಗುಪ್ತ ನೇಮಿಸಿದ್ದಾರೆ. ಎನ್. ರಮೇಶ್ ಈ ಹಿಂದೆ 1996 ರಿಂದ 1999 ರವರೆಗೆ ಕೇಂದ್ರ ರೇಷ್ಮೆ ಮಂಡಳಿ ಸದಸ್ಯರಾಗಿದ್ದ ಸಂದರ್ಭದಲ್ಲಿ ರೇಷ್ಮೆ ಕೃಷಿಕರ ವರದಾನವಾಗಿರುವ ವಿ.ವನ್ ಎಂಬ ಹಿಪ್ಪು ನೇರಳೆ ಸೊಪ್ಪು ವಿಜೇತ ಔಷಧಿ ಹಾಗೂ ಸಿ.ಎಸ್.ಆರ್-2 ಎಂಬ ರೇಷ್ಮೆ ತಳಿಗಳ ಅನುಷ್ಠಾನಕ್ಕೆ ಶ್ರಮಿಸಿದ್ದು ಇವರ ಪರಿಶ್ರಮ ಗುರುತಿಸಿ ಮತ್ತೊಮ್ಮೆ ಕೇಂದ್ರ ರೇಷ್ಮೆ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement