ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾವಿಗೆ ಬಿದ್ದು ವ್ಯಕ್ತಿಗೆ ಗಾಯ

Rashmi Kasaragodu
Updated On : 30 Jan 2014, 1:51 am

ಶಿದ್ಲಘಟ್ಟ: ತಾಲೂಕಿನ ಅಪ್ಪೇಗೌಡನ ಹಳ್ಳಿ ರಸ್ತೆ ಬದಿ ಹಾಳು ಬಾವಿಗೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ವೆಂಕಟೇಶ್ ಬಾವಿಯಲ್ಲಿ ಬಿದ್ದು ಗಾಯಗೊಂಡ ವ್ಯಕ್ತಿ. ವೆಂಕಟೇಶ್ ಬಸವಾಪಟ್ಟಣದ ನಿವಾಸಿಯಾಗಿದ್ದು ವಾಯುವಿಹಾರಕ್ಕೆ ಹೊರಟಿದ್ದಾಗ ಘಟನೆ ಸಂಭವಿಸಿದೆ.
ಅಕ್ರಮ ಮದ್ಯ ಸಾಗಾಟ
ಶಿಡ್ಲಘಟ್ಟ: ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡಲು ತರುತ್ತಿದ್ದ  ವ್ಯಕ್ತಿಯನ್ನು ವರದ ನಾಯಕನಹಳ್ಳಿ ಗೇಟ್ ಬಳಿ ಬಂಧಿಸಿರುವ ಘಟನೆ ನಡೆದಿದೆ. ಕೋಟಹಳ್ಳಿ ಗ್ರಾಮದ ನಿವಾಸಿ ಪೂಜಪ್ಪ ಬಂಧಿತ ವ್ಯಕ್ತಿ. ಪೂಜಪ್ಪ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡಲು ಸಾಗಿಸುತ್ತದ್ದಾಗ ಪೇದೆ ವಿಚಾರಿಸಿದಾಗ ಪ್ರಕರಣ ಬಯಲಾಗಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಉಪ ಲೋಕಾಯುಕ್ತ ಕಚೇರಿ ಕರೆ;  ಪರಿಶೀಲಿಸಲು ಹೈಕೋರ್ಟ್ ಆದೇಶ


ಬೆಂಗಳೂರು: ಮೆಸ್ ಒಂದರ ಪರವಾನಗಿ ವಿವಾದಕ್ಕೆ ಸಂಬಂಧಿಸಿದಂತೆ ಕೋಲಾರ ನಗರಸಭೆ ಆಯುಕ್ತರಿಗೆ ಉಪ ಲೋಕಾಯುಕ್ತ ಕಚೇರಿಯಿಂದ ದೂರವಾಣಿ ಕರೆ ಮಾಡಲಾಗಿದೆ ಎಂಬ ಆರೋಪದ ಕುರಿತು ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಇಲಾಖೆ ಪರ ವಕೀಲರಿಗೆ ಹೈಕೋರ್ಟ್ ಆದೇಶಿಸಿದೆ.
ಕೋಲಾರದಲ್ಲಿನ ಮೆಸ್ ಒಂದನ್ನು ಮುಚ್ಚಿಸುವ ಸಂಬಂಧ ಉಪ ಲೋಕಾಯುಕ್ತ ಕಚೇರಿಯಿಂದ ತಮಗೆ ದೂರವಾಣಿ ಕರೆ ಬಂದಿರುವುದಾಗಿ ನಗರಸಭೆ ಆಯುಕ್ತರು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದು ಸಾಕಷ್ಟು ಗೊಂದಲ ಹುಟ್ಟುಹಾಕುತ್ತಿದೆ. ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ತಮ್ಮ ಹಿಂದೆ ನಡೆಯುತ್ತಿರುವ ಇಂತಹ ಕೃತ್ಯಗಳ ಕುರಿತು ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾ.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠ, ಈ ಸಂಬಂಧ ಮಾಹಿತಿ ಕೇಳಿದೆ.
ವಿವಾದವೇನು?: ನಿಯಮ ಪಾಲಿಸಿಲ್ಲ ಎಂಬ ಆರೋಪದ ಮೇಲೆ ಕೋಲಾರದಲ್ಲಿನ ಮೆಸ್ ಒಂದನ್ನು ಸ್ಥಗಿತಗೊಳಿಸುವಂತೆ ಕೋಲಾರದ ಪುರಸಭೆಯ ಆಯುಕ್ತರು 2012ರ ಡಿಸೆಂಬರ್ 4ರಂದು ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ, ಅದರಲ್ಲಿ ಮೆಸ್ ಮುಚ್ಚಿಸುವಂತೆ ತಮಗೆ ಉಪಲೋಕಾಯುಕ್ತರು ದೂರವಾಣಿ ಕರೆ ಮಾಡಿ ತಿಳಿಸಿರುವುದಾಗಿ ಉಲ್ಲೇಖಿಸಿದ್ದರು. ಇದನ್ನು ಪ್ರಶ್ನಿಸಿ ಮೆಸ್ ಮಾಲೀಕ ವೆಂಕಟಾಚಲಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಸಂದರ್ಭದಲ್ಲಿ ಉಪಲೋಕಾಯುಕ್ತರಿಂದ ಕರೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಪ್ರಮಾಣಪತ್ರ ಸಲ್ಲಿಸುವಂತೆ ಆದೇಶಿಸಿತ್ತು. ಆದರೆ, ಆಯುಕ್ತರು ಪ್ರಮಾಣ ಪತ್ರದಲ್ಲಿ ತಮಗೆ ಉಪಲೋಕಾಯುಕ್ತರಿಂದಲ್ಲ, ಅವರ ಕಚೇರಿಯ ಸಿಬ್ಬಂದಿಯಿಂದ ಕರೆ ಬಂದಿತ್ತು ಎಂದು ತಿಳಿಸಿದ್ದರು. ಇದರಿಂದ ಘಟನೆಯ ಕುರಿತು ಸಂಶಯ ವ್ಯಕ್ತಪಡಿಸಿದ ಪೀಠ, ಈ ಸಂಬಂಧ ವಿವರ ನೀಡುವಂತೆ ಇಲಾಖೆಗೆ ಆದೇಶಿಸಿದೆ.

ಅಂದರ್ ಬಾಹರ್: ವ್ಯಕ್ತಿ ಬಂಧನ

ಚಿಂತಾಮಣಿ: ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ ಸಾವಿರಾರು ರುಪಾಯಿ ನಗದು ವಶಪಡಿಸಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಮಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಪೆರಮಾಚನಹಳ್ಳಿ ಕೆರೆ ಅಂಗಳದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನವೀನ್ ಎಂಬಾತನನ್ನು ಬಂಧಿಸಿ ಇತರೆ 3 ಜನರ ಪೈಕಿ ಮಂಜು ಇನ್ನಿಬ್ಬರು ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ತಿಳಸಿದ್ದಾರೆ. ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ 1,073 ರುಪಾಯಿ ಪೊಲೀಸರು ವಶಪಡಿಸಿಕೊಂಡು ಪ್ರಕರಣ ಖಲಿಸಿಕೊಂಡಿದ್ದಾರೆ.


ಅಪಘಾತದಲ್ಲಿ ಇಬ್ಬರಿಗೆ ಗಾಯ
ಚಿಂತಾಮಣಿ: ತಾಲೂಕಿನ ಕೈವಾರ ಕ್ರಾಸ್ ಬಳಿ ಟ್ಯ್ರಾಕ್ಟರ್ನಲ್ಲಿ ಟೊಮೇಟೋ ಬೆಳೆಗೆ ಬಳಿಸುವ ಕಟ್ಟಿಗೆ ತುಂಬಿದ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಖಂಗೊಂಡ 2 ವಾಹನಗಳನ್ನು ಕೈವಾರದ ಹೊರ ಪೊಲೀಸ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮೇಕೆಗಳ ಕಳ್ಳತನ: ದೂರು
ಚಿಂತಾಮಣಿ: ತಾಲೂಕಿನ ಚಿಂತಾಮಣಿ-ಬೆಂಗಳೂರು ಮಾರ್ಗದ ವೈಜಕೂರು ಗ್ರಾಮದ ರೈತ ಕೆಂಪಣ್ಣ ಎಂಬವರಿಗೆ ಸೇರಿದ 4 ಮೇಕೆಗಳನ್ನು ಮಂಗಳವಾರ ರಾತ್ರಿ ಕಳ್ಳತನ ಮಾಡಿ ಪರಾರಿಯಾಗಿರುವುದಾಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement