ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾತ್ರೋರಾತ್ರಿ ಮರಗಳ ಕಡಿದು ಮಾರಾಟ

Rashmi Kasaragodu
Updated On : 30 Jan 2014, 1:43 am

ಬಂಗಾರಪೇಟೆ: ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯಿರುವ ಇಲಾಖೆಯ ಎಂಜಿನಿಯರ್ ಕಚೇರಿ ಎದುರೇ ಅರಣ್ಯ ಇಲಾಖೆ ಅನುಮತಿ ಪಡೆಯದೇ ಸುಮಾರು 10ಕ್ಕೂ ಹೆಚ್ಚು ಮರಗಳನ್ನು ಕಡಿದು ಮಾರಾಟ ಮಾಡಿರುವ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.
ಮರಗಳನ್ನು ಬೆಳೆಸಬೇಕೆ ವಿನಃ ಅದನ್ನು ಕಡಿಯಬಾರದು ಇದು ಕಾನೂನು ಬಾಹಿರವಾಗಿದ್ದರೂ ರೈಲ್ವೆ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಯಾರಿಗೂ ಗೊತ್ತಾಗದಂತೆ 10ಕ್ಕೂ ಹೆಚ್ಚು ಮರಗಳನ್ನು ಕಡಿದು ಬೆಳಗಾಗುವಷ್ಟರಲ್ಲಿ ಅವುಗಳನ್ನು ಮಿಲ್ಗೆ ಸಾಗಿಸಲಾಗಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಕೊಠಡಿ ನಿರ್ಮಾಣಕ್ಕೆ ಮರ ಅಡ್ಡಿಯಾದ್ದರಿಂದ ಕಡಿಯಲಾಗಿದೆ ಎಂದು ಹೇಳುವರು. ಆದರೆ ಒಂದು ಕೊಠಡಿ ನಿರ್ಮಾಣಕ್ಕೆ 10ಮರಗಳನ್ನು ಬಲಿ ಕೊಡಬೇಕೆ ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ಇಲಾಖೆ ಮೇಲಾಧಿಗಳಿಗಳ ಗಮನಕ್ಕೂ ತಂದಿಲ್ಲ ಮತ್ತು ಅರಣ್ಯ ಇಲಾಖೆಗೂ ಮಾಹಿತಿ ನೀಡದೆ ರಾತ್ರೋರಾತ್ರಿ ಕಟಾವು ಮಾಡುವು ಅವಶ್ಯಕತೆ ಏನಿತ್ತು ಎಂದು ಸಾರ್ವಜನಿಕರು ಇಲಾಖೆ ಧೋರಣೆ ಖಂಡಿಸಿದ್ದಾರೆ.
ಇಲಾಖೆ ಎಂಜಿನಿಯರ್ ಕಚೇರಿ ಬಳಿ ಹಾಗೂ ವಸತಿ ಗೃಹಗಳ ಬಳಿ ಮರಗಳ ಮಾರಣ ಹೋಮ ನಡೆದಿದ್ದರೂ ಅರಣ್ಯ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಿದ್ದರೂ ಪ್ರಶ್ನಿಸುವ ಗೋಜಿಗೆ ಹೋಗದಿರುವುದು ಅಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಳೆದ ವರ್ಷ ಸಹ ರೈಲ್ವೆ ನಿಲ್ದಾಣದೊಳಗೆ ಬೃಹತ್ ಮರವನ್ನು ಅಭಿವೃದ್ಧಿ ನೆಪದಲ್ಲಿ ಇಲಾಖೆ ಕಡಿಯಲಾಗಿತ್ತು. ಈಗ ಸದ್ದಿಲ್ಲದೆ ಕೊಠಡಿ ನಿರ್ಮಾದ ಹೆಸರಲ್ಲಿ 10ಮರಗಳನ್ನು ಕಡಿಯಲಾಗಿದೆ.ಈ ಬಗ್ಗೆ ಇಲಾಖೆ ಮೇಲಾಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ  ಸೂಕ್ತ ಕ್ರಮಕೈಗೊಂಡು ಮತ್ತೆ ಪ್ರಕರಣ ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಪರಿಸರವಾದಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

'ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಿ'
ಬಂಗಾರಪೇಟೆ: ರಸ್ತೆ ನಿಯಮಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸುವ ಮೂಲಕ ಅಮೂಲ್ಯವಾದ ಜೀವವನ್ನು ರಕ್ಷಿಸಿಕೊಳ್ಳಬೇಕೆಂದು ಡಿವೈಎಸ್ಪಿ ವಿವೇಕಾನಂದ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶಾಲಾ ಮಕ್ಕಳಿಂದ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾಹನ ಚಾಲಕರು ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು, ನಂತರ ರಸ್ತೆ ನಿಯಮಗಳನ್ನು ತಿಳಿದುಕೊಂಡು ಪಾಲಿಸಬೇಕು ಎಂದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement