ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ಗುಡಿಬಂಡೆ: ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಲೋಕಾಯುಕ್ತ ಇನ್ಸ್ಪೆಕ್ಟರ್ ಮಂಜೇಗೌಡ ನೇತೃತ್ವದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ನಡೆಯಿತು.
ಸಭೆಯಲ್ಲಿ ಉಲ್ಲೋಡು ಗ್ರಾಪಂಗೆ ಸಂಬಂಧಿಸಿದ 3 ಅರ್ಜಿಗಳು ಖಾತ್ರಿ ಹಣ ನೀಡುವಲ್ಲಿ ವಿಳಂಬ, ಗ್ರಾಮಗಳಲ್ಲಿ ಚರಂಡಿ ದುರಸ್ತಿ ಕುರಿತು ಸಾರ್ವಜನಿಕರು ದೂರು ನೀಡಿದರು.
ಮಂಜೇಗೌಡ ಮಾತನಾಡಿ, ಕಾರ್ಯನಿರ್ವಹಣಾಧಿಕಾರಿ ಕಳೆದ ಮೂರು ಸಭೆಗಳಿಗೂ ಗೈರುಹಾಜರಾಗಿದ್ದು ಆದಷ್ಟು ಬೇಗ ಲೋಕಾಯುಕ್ತ ಕಚೇರಿಗೆ ಬಂದು ಕಾಣುವಂತೆ ಸಭೆಗೆ ಬಂದಿದ್ದ ಅಧಿಕಾರಿಗೆ ತಾಕೀತು ಮಾಡಿದರು.
ಕಂದಾಯ ಇಲಾಖೆ ಶಿರಸ್ಥೆದಾರ್ ಸಿಗ್ಬತ್ವುಲ್ಲಾ, ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಸಿಡಿಪಿಒ ಸಿದ್ದಲಿಂಗಪ್ಪ ಮತ್ತಿತರರು ಇದ್ದರು.